ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
‘ನಕ್ಕು ಮುಂದೆ ಸಾಗುತಿರು
ನಿನ್ನವರೆನಿಸಿಕೊಂಡವರು ದೂರ ನಿಂತಾಗ
ಪ್ರತಿಹೆಜ್ಜೆಗೂ ತಪ್ಪು ಹುಡುಕುವವರ ಕಂಡಾಗ
ಸುಮ್ಮನೊಂದು ನಗು ಬೀರಿ ಸಾಗು ಮುಂದೆ
ಅಲ್ಪಜ್ಞಾನಿ ಬಿಡದೆ ಬಡಾಯಿ ಕೊಚ್ಚುವಾಗ
ಅವಿವೇಕಿಯನೆಲ್ಲರೂ ಅಭಿನಂದಿಸುವಾಗ
ಹೀಗೊಂದು ನಗೆಯಾಡಿ ನಡೆಯುತಿರು ಮುಂದೆ
ಮಾತು ಮಾತಿಗೂ ಮನನೋಯಿಸುವವರ
ಮಾತಿಗೂ ಮತಿಗೂ ಸಂಬಂಧವಿಲ್ಲದವರ
ಕಂಡೊಮ್ಮೆ ನೋಡಿ ನಕ್ಕು ಬಿಡು ಸುಮ್ಮನೆ
ಸಮಯಕ್ಕೆ ಹೊಂದುವ ಬಣ್ಣ ತೊಡುವವರು
ಅವಶ್ಯಕತೆಗಾಗಿ ನಿನ್ನ ಅವಲಂಬಿಸುವವರು
ಎದುರು ಕಂಡಾಗ ಹೀಗೊಮ್ಮೆ ನಕ್ಕು ಬಿಡು
ಲಂಚ ಭ್ರಷ್ತಾಚಾರ ಮೇಲುಗೈ ಸಾಧಿಸಿದಾಗ
ಸಮಯ ಸಾಧಕರೆ ಜಗದಿ ತುಂಬಿರುವಾಗ
ಹುಸಿನಗೆಯನೊಂದ ಬೀರಿ ಸಾಗುತಿರು ಮುಂದೆ
ಮಧುಮಾಲತಿರುದ್ರೇಶ್ ಬೇಲೂರು
ಸಂಗಾತಿ ಬ್ಲಾಗ್ ಹೊಸಬರಹಗಾರರಿಗೆ ಅತ್ಯುತ್ತಮ ವೇದಿಕೆ.ಎಲ್ಲರನ್ನೂ ಪ್ರೋತ್ಸಾಹಿಸುವ ತಮ್ಮ ಸಾಹಿತ್ಯ ಪ್ರೀತಿಗೆ ಶರಣು.ಇನ್ನೂ ಹೆಚ್ಚಿನ ಓದುಗರನ್ನು ಸೆಳೆಯಲಿ ಎಂಬ ಆಶಯದೊಂದಿಗೆ.
ಮಧುಮಾಲತಿಬೇಲೂರು
This is very nice….wrd…
‘ನಕ್ಕು ಮುಂದೆ ಸಾಗುತಿರು’ ತಮ್ಮ ಕವಿತೆ ತುಂಬಾ ಅರ್ಥಪೂರ್ಣವಾಗಿದೆ ಮೇಡಂ.