“ಪ್ರಾಣಿ ಮತ್ತು ಮನಷ್ಯರಲ್ಲಿರುವ ವೈರುಧ್ಯಗಳು” ಬಾರತಿ ಅಶೋಕ್

ಈಗಷ್ಟೆ ನಾಯಿಗೆ ಊಟ ಹಾಕಿ(ಬೀದಿ ನಾಯಿಗೆ)  ಬರುವಾಗ ಒಂದಕ್ಕಿಂತ ಹೆಚ್ಚು ನಾಯಿಗಳು ಕಿತ್ತಾಡುವ ಸದ್ದು ಕೇಳಿ ಹಿಂದಿರುಗಿದೆ. ಅಲ್ಲಿ ಆರೇಳು ನಾಯಿಗಳಿದ್ದವು. ಅದರಲ್ಲಿ ಎರಡು  ನಾಯಿಗಳು ತುಂಬಾ ತೆಳ್ಳಗೆ ಬಳುಕುವ ಬಳ್ಳಿಯಂತಿದ್ದವು. ಅವು ಹೆಣ್ಣು ನಾಯಿಗಳು. ಸಾಮಾನ್ಯವಾಗಿ ಊಟ ಹಾಕಿ ನಾನು ಗಮನಿಸುತ್ತೇನೆ. ಊಟ ಹಾಕಿದ ತಕ್ಷಣ  ಅಕ್ಕಪಕ್ಕದ ನಾಯಿಗಳು ಬರುತ್ತವೆ. ಅವು ತಿನ್ನಲು ಹಿಂಜರಿಯುತ್ತವೆ. ಅಚೀಚೆ ಗಮನಿಸುತ್ತವೆ. ಯಾವ ನಾಯಿಯ ಸುಳಿವು ಇಲ್ಲ ಎಂದರೆ ತಿನ್ನಲು ಪ್ರಾರಂಭಿಸುತ್ತವೆ. ಕಾರಣ ಎಲ್ಲಿಂದಲೋ ಓಡಿ ಬಂದ  ನಾಯೊಂದು ಅವನ್ನು ಏಕಾಏಕಿ ಕಚ್ಚಿ ಬಿಡುತ್ತದೆ. ಹಾಗೆ ಕಚ್ಚುವ ನಾಯಿ ಬಲಿಷ್ಠವಾಗಿರುತ್ತದೆ, ಮತ್ತದು ಗಂಡು ನಾಯಿಯಾಗಿರುತ್ತದೆ.  ಹಾಗೆ ಗಂಡು ನಾಯಿ ಬಂದದ್ದು ಗೊತ್ತಾದರೆ, ಹೆಣ್ಣು ನಾಯಿ  ಅನ್ನ ತಿನ್ನುವುದನ್ನು ಬಿಟ್ಟು ದೂರ ಸರಿದು ನಿಲ್ಲಿತ್ತವೆ. ಇದು ನನಗೆ ನಮ್ಮ ಹಳ್ಳಿಗಳಲ್ಲಿ ಗಂಡಸರು ಬಂದ ಕೂಡಲೇ ಹೆಣ್ಣು ಮಕ್ಕಳು ತಲೆ ಮೇಲೆ ಸೆರಗು ಹೊದ್ದು ಸರಿದು  ನಿಲ್ಲುತ್ತಾರಲ್ಲ! ಅದು ನೆನಪಾಗುತ್ತದೆ.  ಮತ್ತು ಹೆಣ್ಣು ಮಕ್ಕಳು ತಾವು ಹಸಿದುಕೊಂಡಿದ್ದರೂ ಗಂಡಸರಿಗೆ ಮೊದಲು ಉಣಬಡಿಸಿ ನಂತರ ಮಿಕ್ಕಿದ್ದನ್ನು ತಾವು ಉಣ್ಣುವಂತಹ ಚಿತ್ರ ಕಣ್ಮುಂದೆ ಬರುತ್ತದೆ.
ಹೆಣ್ಣು ನಾಯಿ ಹಾಗೆ ದೂರ ಸರಿದು ನಿಂತರೂ ಗಂಡು ನಾಯಿಗೆ ಇಷ್ಟ ಆದರೆ ಊಟ ತಿನ್ನುತ್ತದೆ. ಇಲ್ಲದಿದ್ದರೆ ಆ ನಾಯಿಗಳಿಗೂ ತಿನ್ನಲು ಬಿಡದಂತೆ ಕಾಯುತ್ತದೆ. ಒಂಚೂರು ಭಿನ್ನವಿಲ್ಲಿ. ಅದೇನೆಂದರೆ “ಬಲಿಷ್ಠನಿಗೆ ಬದುಕು” ಎನ್ನುವಂತೆ   ಬಲಿಷ್ಠ ನಾಯಿ ಉಳಿದ ಗಂಡು/ಹೆಣ್ಣು ನಾಯಿಗಳಿಗೆ ತಿನ್ನಲು ಬಿಡದಂತೆ ತಾನೇ ತಿನ್ನುವ ಮತ್ತು ತಾನು ತಿನ್ನದಿದ್ದರೂ ಇತರರಿಗೆ ತಿನ್ನ ಬಿಡದಂತೆ  ಅಲ್ಲಿಂದ ನಾಯಿಗಳನ್ನು ಓಡಿಸುತ್ತದೆ.

ಇದು ಸಾಮಾನ್ಯವಾಗಿ ಕಾಣ ಸಿಗುವ ದೃಶ್ಯ.  ಅದರೆ  ಇಲ್ಲೊಂದು ಪ್ರೀತಿಯ ಒಳಮುಚ್ಚುಗತನವೂ ಇದೆ. ಅದನ್ನು ನಾನಿಂದು ಗಮನಿಸಿದೆ. ನಾನೀಗಾಗಲೇ ಹೇಳಿದಂತೆ ಊಟ ಹಾಕಿದ ಕೂಡಲೇ ಅಷ್ಟು ನಾಯಿಗಳು ಬಂದವು. ಅದರಲ್ಲಿ ಬಲಿಷ್ಠವಾದ ಗಂಡು ನಾಯಿ ಮುಂದೆ ಬಂದು ಉಳಿದ ನಾಯಿಗಳನ್ನು ದೂರ ಸರಿಸಿತು. ಅದರೆ ಒಬ್ಬ ಬಳಕುವ ಸುಂದರಿ ಮಾತ್ರ ದೂರ ಸರಿಯದೇ ಅ ಬಲಿಷ್ಠ ನಾಯಿಯ ಪಕ್ಕದಲ್ಲಿಯೇ ಬಂದು ನಿಂತಳು. ಇನ್ನೊಬ್ಬ ಸುಂದರಿಯೂ ಅಲ್ಲಿದ್ದಳು. ಆದರೆ ಆಕೆ ದೂರ ನಿಂತಿದ್ದು ಸೋಜಿಗ. ಆಕೆ ಈತನಿ(ಗಂಡು ನಾಯಿಯ)ಗೆ ಸಂಬಂಧಿಸಿದವಳಲ್ಲ. ಹಾಗಾಗಿ ಆಕೆ ದೂರ ನಿಂತಿದ್ದಳು ಅನ್ನಿಸಿತು. ಈ ಸುಂದರಿ ವೈಯಾರವಾಗಿ ಆತನ ಮುಂದೆಯೇ ಬಂದಳು. ಆತ ಹಿಂದೆ ಸರಿದು ಆಕೆಗೆ ಕಾವಲಾಗಿ ನಿಂತನು. ಆಕೆ ಊಟ ಮುಗಿಸು  ಸರಿದು ನಿಂತಳು. ಆತ, ಅಕೆ ಉಳಿಸಿ ಬಿಟ್ಟದ್ದನ್ನು ತಿಂದನು. ಇದು ನಮ್ಮ ಹೆಣ್ಣು ಮಕ್ಕಳಿಗೆ ವಿರುದ್ಧ ಅನ್ನಿಸಿತು. ಪತಿ ದೇವರು ಊಟ ಮುಗಿಸುವತನಕ ಕಾದು ಕುಳಿತು ಅದೇ ತಟ್ಟೆಯಲ್ಲಿ ತಾವು ಊಟ ಮಾಡುವುದು ನಮ್ಮ ಹೆಣ್ಣು ಮಕ್ಕಳ ಸಂಸ್ಕೃತಿ. ಪ್ರೀತಿಯಲ್ಲಿ ನಾಯಿಗಳು ಮನುಷ್ಯನಿಗಿಂತ ಒಂದು ಹೆಜ್ಜೆ ಮುಂದಿವೆ ಎನ್ನಿಸಿತು.

ನಾಯಿಗಳು ತಾವು ವರಿಸಿದ ಅಥವಾ ತನ್ನದೇ ಎಂದು ಭಾವಿಸಿದ ಹೆಣ್ಣಿ(ನಾಯಿ)ಗೆ ಅದೆಷ್ಟು ಪ್ರೀತಿ ಮುತುವರ್ಜಿಯಿಂದ ಕಾವಲಿರಿಸಿ ಹೊಟ್ಟೆ ತುಂಬಿಸುತ್ತವೆ.  ಆದರೆ ಮನುಷ್ಯ ತಾನು ತನಗಾಗಿ ಬಂದ ಹೆಣ್ಣಿಗೆ ಒಂದೊತ್ತು ಊಟ ಹಾಕದ ಗಂಡಸರು ಇದ್ದಾರೆ ನಮ್ಮ ನಡುವೆ ಎನ್ನುವುದನ್ನು ನೆನೆದಾಗ ನಿಜಕ್ಕು ಪ್ರಾಣಿಗಳಿಗಿರುವ ಕಾಳಜಿ  ಮನುಷ್ಯರಿಗಿಲ್ಲ ಎನ್ನುವುದು ಶೋಚನೀಯ


Leave a Reply

Back To Top