ಸವಿತಾ ಮುದ್ಗಲ್ ಕವಿತೆ-ಜೀವನ ನೌಕೆ

ಬದುಕೆಂಬ ಸಾಗರದ ನೋವೆಂಬ ಕಡಲಿಗೆ
ಸಾರಥಿಯು ನಾವಿಬ್ಬರು ಹುಟ್ಟು ಹಿಡಿಯಲು

ಜೋರಾದ ಬಿರುಗಾಳಿ ಬಂದಿರಲು ಬಾಳಿಗೆ
ನಿಲುವು ಕಾಣದಂತೆ ಕೆಂಗೆಟ್ಟು ಹೋಗಲು

ದೂರದ ಮಾರುತ ಕಣ್ಣಿಗೆ ಸುಂದರವು
ಬಳಿ ಹೋದರೆ ತಿಳಿದೀತು ಮನಕೆಲ್ಲವು

ಯಾರಿಗೆ ಯಾರಿಲ್ಲ ಕಲಿಯುಗದ ಬಾಳಿಗೆ
ನೀರ ಮೇಲಿನ ಗುಳ್ಳಿ ನಿಜವಾಯಿತು

ಹಣೆಗಟ್ಟಿಯೆಂದು ಕಲ್ಲಿಗೆ ಬಡೆದುಕೊಂಡರೆ
ದೇಹಕೆ ನೋವೆಂದು ತಿಳಿಯದೆ ಮೂರ್ಖರೆ

ನೋವಿನಲಿ ಸುಳಿವಿಲ್ಲ ನಿಸ್ವಾರ್ಥ ಬದುಕಿಗೆ
ಹಣವಿದ್ದರೆ ಬಳಗಕೆ ನಾವೆಲ್ಲಾ ಬೇಕಾಗುವೆವು


ಸವಿತಾ ಮುದ್ಗಲ್

Leave a Reply

Back To Top