ನನ್ನ ಬದುಕು ನನ್ನ ಹೆಮ್ಮೆ(ಆಟೋ ಚಾಲಕಿ ಫ್ರಭಾ ಬದುಕಿನ ಚಿತ್ರಣ)ಡಾ.ಸುಜಾತಾ.ಸಿ

ಹೆಣ್ಣು ಜಗದ ಕಣ್ಣು ಹೌದು ಹೆಣ್ಣು ಯಾವುದೇ ಕೆಲಸದಲ್ಲಿ ಹಿಂದೆ ಸರಿದಿಲ್ಲ ದಿಟ್ಟಗಿತ್ತಿ ಅವಳು.‌ ಈಗ ನಾನು ಒಬ್ಬ ಗಟ್ಟಿಗಿತ್ತಿ ಮಹಿಳೆಯನ್ನು ನಿಮಗೆ ಪರಿಚಯಿಸಲು ಹೊರಟಿರುವೆ. ಬೆಳಗಾವ ಅಂದ್ರ ನಮಗೆ ಬಲು ಖುಷಿ. ಯಾಕೆಂದರೆ ವರ್ಷದಲ್ಲಿ ಎರಡು ಬಾರಿ ಬರುತ್ತಲೇ ಇರುತ್ತೇವೆ. ಬಂದ ನಂತರ ಪೇಟೆ ಸುತ್ತೊದು ಎಲ್ಲರದ್ದು ಇದ್ದೆ ಇರುತ್ತೆ. ದಿನ ಸಾಯಂಕಾಲ ಆದರೆ ಸಾಕು ಎಲ್ಲ ಪ್ರಾಧ್ಯಾಪಕರು ಬೇಸರ ಕಳೆಯಲು ಸುತ್ತುತ್ತೇವೆ. ಮನಸ್ಸಿಗೆ ಬಂದದ್ದನ್ನು ಶಾಪಿಂಗ ಮಾಡುತ್ತೇವೆ. ಹಣ್ಣು ಹಂಪಲು ಹಾಗೇ ಬೆಳಗಾವ ಕುಂದಾ ತಂದು ತಿನ್ನುವದರಲ್ಲಿ ಬಲು ಖುಷಿ ನಮಗೆ. ಬೆಳಗಾವ ಕುಂದಾನಗರಿ ಮಾತ್ರ ಅಲ್ಲ ಅಲ್ಲಿ ಕುಂದಾದಷ್ಟೇ ಸಿಹಿ ಕೊಡುವ ಮನಸ್ಸಿಗೆ ಮುದ ನೀಡುವ ಊರು ಕೂಡಾ ಹೌದು. ನಿಮಗೆ ತಿಳಿಸಬೇಕಾದ ಸಂಗತಿ ಹೇಳಿಬಿಡುವೆ. ಒಂದು ಕಾಲಕ್ಕೆ ಹೆಣ್ಣು ಹೊಸ್ತಿಲ ದಾಟಬೇಕೆಂದ್ರೆ ಅವಳಿಗೆ ಪರವಾನಿಗೆ ಬೇಕಿತ್ತು. ಆದರೆ ಇಂದು ಬೈಕ್ , ಬಸ್ಸ, ರೈಲು, ಪೆಟ್ರೊಲಬಂಕ, ವಿಮಾನ ಎಲ್ಲದರಲ್ಲೂ ಹೆಣ್ಣು ತನ್ನತನವನ್ನು ತನ್ನ ವ್ಯಕ್ತಿತ್ವವನ್ನು ತೊರಿಸುತ್ತಲೇ ಮುಂದೆ ಸಾಗಿದ್ದಾಳೆ. ಇಲ್ಲಿ ಅಪರೂಪವಾಗಿ ಕಾಣುವ ಈ ಹೆಣ್ಣುಮಗಳು ಅಷ್ಟೇನು ವಿದ್ಯಾಭ್ಯಾಸವನ್ನು ಪಡೆಯದೇ ಇರುವ ತನಗೆ ದೊಚಿದ್ದನ್ನು ಅವಳು ಮಾಡುವ ಛಲಗಾರ್ತಿ ಕೂಡಾ ಹೌದು. ಕುಟುಂಬವೆಂದ ಮೇಲೆ ಹೆಣ್ಣು ಗಂಡು ಇಬ್ಬರೂ ಇಂದು ಆರ್ಥಿಕ ವ್ಯವಸ್ಥೆಯನ್ನು ಹದಗೊಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮಹಾನಗರಿಗಳಲ್ಲಿ ಕುಟುಂಬ ನಡೆಸುವದು ಅಷ್ಟು ಸರಳವಾಗಿರುತಂತಹದ್ದು ಅಲ್ಲ. ಗಂಡ ಹೆಂಡತಿ ಇಬ್ಬರೂ ದುಡಿದರೂ ಹೊಟ್ಟೆಗೆ ಮತ್ತು ಮಕ್ಕಳ ಶಾಲೆಯ ಪೀಸ್ ಗೆ ಸರಿಹೊಗುತ್ತದೆ. ಇಂತಹ ಸಮಯದಲ್ಲಿ ಪ್ರಭಾ ಅವರು ದಿನನಿತ್ಯ ಅಡುಗೆ ಮಾಡಿಕೊಂಡು ಸರಳ ಬದುಕನ್ನು ಬದುಕುವ ಮಹಿಳೆಯಾಗಿದ್ದಳು. ಬಡತನವೆಂಬ ಈ ಬರಿದಾದ ಬದುಕು ನಗು ಕಸಿದುಕೊಂಡು ಜೀವಕ್ಕೆ ಸದಾ ಘಾಸಿಗೊಳಿಸುತ್ತಲೇ ಇರುತ್ತಿತ್ತು. ಆಗ ಅವಳು ತನ್ನಲ್ಲಿ ಅಡಗಿದ್ದ ಛಲವನ್ನು ಧರ್ಯ ಮಾಡಿ ತಾನು ಅಂದುಕೊಂಡಂತೆ ಬದುಕಿದ ಕತೆ ಇದು. ಬಡತನದಿಂದ ಬೇಸತ್ತ ಅವಳು ಜೀವನದಲ್ಲಿ ತನ್ನ ನಗು ತಾನೇ ತಂದುಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆ ಇಂದು ನಮಗೆ ಬೇಕಾಗಿದೆ. ಇಂತಹ ಖುಷಿಯನ್ನು ತಂದು ಕೊಂಡ ಮಹಿಳೆ ಪ್ರಭಾ ಬಿಸಿರೊಟ್ಟಿ ಅವರು. ಸಾಮಾನ್ಯ ಜೀವನ ನಡೆಸಿಕೊಂಡು ಹೊಗುತ್ತಿದ್ದ ಈ ಮಹಿಳೆಯನ್ನು ನಾನು ಪೇಟೆಯಿಂದ ಬರುವಾಗ ನೊಡಿದೆ ಜೊತೆಗೆ ನನ್ನ ಸ್ನೇಹಿತೆಯರು‌ ಇದ್ದೇವು. ಅವಳ ಆಟೊದಲ್ಲಿಯೇ ಹತ್ತಿ ಕುಳಿತುಕೊಂಡು ” ಎಷ್ಟು ತಗೊತಿರಾ ಅಂತೆಲ್ಲಾ ಹಣದ ಬಗ್ಗೆ ವಿಚಾರಿಸುತ್ತಿದ್ದೇವು. ಅವಳು ಹೇಳುವದಕ್ಕಿಂತ ಸ್ಬಲ್ಪ ಕಡಿಮೆ ಮಾಡೊಣ ಅಂತ ಕೇಳುತ್ತಿರುವಾಗ ಮನಸ್ಸಿನಲ್ಲಿ ಒಂದು ಪ್ರಶ್ನೇ ಹಾದು ಹೋಗಿದ್ದಂತು ನಿಜ ” ಪುರುಷ ಆಟೊ ಚಾಲಕನಿಗೆ ಕೇಳಿದಷ್ಟು ಕೊಡುವ ನಾವು ಇಲ್ಲೇಕೆ ಚೌಕಾಸಿ ಎನ್ನುತ್ತಲೇ ಕೇಳುವುದು ಬೇಡಾ’ ಎಂದು ಅವಳ‌ ಆಟೊದಲ್ಲಿಯೇ ಪಯಣ ಬೇಳೆಸಿದೆವು.‌ಉತ್ತರ ಕರ್ನಾಟಕದಲ್ಲಿ ಒಬ್ಬ ಮಹಿಳೆ ಆಟೋ ಓಡಿಸುವುದು ಎಂದರೆ ಅದೊಂದು ಸಾಹಸದ ಕೆಲಸವೇ ಸರಿ.ಅದು ನನಗೆ ಸಿಕ್ಕಿರುವದಕ್ಕೆ , ಅವಳನ್ನು ನೊಡಿ ನನಗೆ ತುಂಬಾ ಖುಷಿಯಾಯಿತು. ಅವಳು ಡ್ರೈವ್ ಮಾಡುವದನ್ನೆ ನೋಡುತ್ತಲೇ ಪುಳಕಗೊಂಡುಬಿಟ್ಟೆ. ಹಾಗೇ ಅವಳ ಜೀವನದ ಕುರಿತು ಕೇಳಬೇಕೆಂಬ ಕೂತುಹಲದಿಂದ ಮಾತಿಗಿಳಿದೆ. ಮನದಲ್ಲಿ ನೂರಾರು ಮಾತುಗಳು ಭರದಿಂದ ಅಪ್ಪಳಿಸುತ್ತಿತ್ತು. ಸಣ್ಣಗೆ ಅವಳ ಹತ್ತಿರಕ್ಕೆ ಬಗ್ಗಿಕೊಂಡು ನಿಮ್ಮ ಹೆಸರೇನು ಎಂದೆ. ‘ನಾನ ಪ್ರಭಾ ಅಂತ ರಿ ನನ್ನ ಹೆಸರು ಅಂದಳು’. ಯಾವ ಊರು ಎಂದೆ. ಇದೇ ಬೆಳಗಾವದ ರುಕ್ಮಣಿ ನಗರ ರಿ ನಮ್ಮದು ಎಂದಳು. ಅಲ್ಲಿಯವರೆಗೆ ಅವಳ ಮಾತು ಬಿಗಿಯಾಗಿಯೇ ಇತ್ತು ಆದರೂ ಬಿಡದೆ ನಿಮ್ಮನ್ನು ನೋಡಿದಕ್ಕ ನನಗ ಬಹಳ ಖುಷಿ ಆಯಿತು ನೊಡ್ರಿ ಅಂದೆ. ಅವಳು ನಗುತ್ತಲೇ ಆಟೊ ಓಡಿಸುತ್ತಿದ್ದಳು. ನಿಮಗ ಹ್ಯಾಂಗ ಆಟೊ ಓಡಿಸ ಬೇಕು ಅಂತಾ ಅನಿಸ್ತು.ಯಾರು ಆಟೊ ಓಡಿಸಬೇಕು ಅಂತ ಅಷ್ಟ ಸಹಜವಾಗಿ ಅಂದು ಕೊಳ್ಳಲ್ಲ ಅದಕ್ಕ ಕೇಳಿದೆ ಅಂದೆ.ಅವಳು ತಟ್ಟನೆ “ಎಲ್ಲಿ ಇಚಾರರ ಮೆಡಮ ಹೊಟ್ಟಿ ಪಾಡರ್ರಿ ಹಂಗ ಕಲತೆ ಎಂದಳು”. ಹಂಗ ಅಲ್ಲವಾ ಇದನ್ನ ಓಡಿಸಬೇಕ ಅಂತಾ ಯಾಕ ಅನಿಸ್ತು ನಿನಗ. ಅದೇರೀ ” ನೋಡ್ರಿ ಮೆಡಮ್ಮರ ನಿಮ್ಮ ಹಂಗ ನಾವ ಏನ ಕಲತೇವ್ರ ಇಲ್ಲ , ಅಟ ನಾಕ ಐದನೇತ್ತೇ ಅಷ್ಟ. ಆವಾಗ ಕಲಿಲಿಲ್ಲ . ಕಲಿತಿದ್ದರ ಏನರ ನೊಕರಿನೊ ಪಾಕರಿನೊ ಮಾಡತಿದ್ದೆ ಆದರ ಇದು ನನಗ ಅನಿವಾರ್ಯ ಐತಿ ಎಂದಳು” . ಸಣ್ಣಗೆ ಅವಳ ಮುಖದಲ್ಲಿ ಮುಖ ಕೊಟ್ಟು ನಿಮ್ಮ ಮನಿಯವರು ಎಂದೆ ಅವರು ಆಟೊ ಹೊಡಿತಾರ್ರಿ. ಹೌದ ಅವರು ನಿನಗ ಆಟೊ ಹೊಡಿಯಾಕ ಹುಂ ಅಂದ್ರೇನು ಅಂತಾ ಕೇಳಿದೆ. ” ಮೊದಲ ನಾನ ಅವರಿಗೆ ಹೇಳಿರಲೇ ಇಲ್ಲರಿ, ನಂತರ ಸ್ವಲ್ಪ ದಿನ ಆದ ಮೇಲೆ ನಾನು ಆಟೊ ಹೊಡಿಯೊದು ಕಲಿತಿನಿ ಅಂದೆ. ಅವರೂ ಆಟೋ ಹೊಡಿತಿದ್ರಲ್ಲರಿ ಅದಕ್ಕ ಸುಮ್ಮನಾದರೂ. ಬೇರೆದವರ ಹತ್ರ ಕಲಿಲಾಕ ನಾನ ಹೋಗಲಿಲ್ಲ . ಅವರಿಗೆ ಎರಡ ಸಾವಿರ ಕೊಟ್ಟು ಆಟೊ ಹೊಡೆದನ್ನ ಕಲತಿನಿ ಎಂದಳು. ಅವಳ ಮಾತು ಕೇಳಿ ಬಹಳ ಖುಷಿ ಎನಿಸಿತು. ಹೌದ ನೊಡವಾ ಇದ್ರ ನಿನ್ನಂಗ ಇರಬೇಕು ಎಂದೆ. ಮೊದಲ ಏನ ಮಾಡತಿದ್ದಿ ನೀನು ಅಂದೆ .ಮೊದಲರ್ರಿ ಮೆಡಿಕಲ್ ಹಾಸ್ಟೆಲನ್ಯಾಗ ಅಡಗಿ ಕೆಲಸ ಮಾಡತಿದ್ದೆರಿ. ಆದರ ಅಲ್ಲಿ ಹೊದ್ರ ರಾತ್ರಿ ಮನಿಗ ಬರಾಕ ಆಗತ್ತಿದ್ದಿಲ್ಲರಿ ರಾತ್ರಿ ಅಲ್ಲೆ ಮಕ್ಕೊಳೊದು ಆಯ್ತು. ನನಗೂ ಮನಿ ಮಠ ಅದ ಅಂತ ಅನಕೊಂಡು ಇಚಾರ ಮಾಡಿ ನಾ ಅಡಗಿ ಮಾಡೊದು ಬಿಟ್ಟು ಸ್ವಂತ ಉದ್ಯೊಗ ನಂದು ಅಂತ ಇರಲಿ ಅಂತಾ ಇಚಾರ ಮಾಡಿ ಈ ಚಾರ್ಜಿನ ಆಟೊ ತಗೊಂಡಿರಿ ಅಂದಳು. ಓ ಹೌದಾ ಎಂದಾಗ ಹುಂನರಿ ಮೊದಲ ಆಟೊ ಓಡಿಸೊದ ನೋಡಿ ಮಂದಿ ನಗತ್ತಿದ್ದರು. ನಕ್ಕೊರೇನ ಹೊಟ್ಟಿಗೆ ಹಾಕತಾರ್ರ ಅಂತ ವಿಚಾರ ಮಾಡಿ ದಿನಾ ಸಂಜಿಕ ಕಲತೇರಿ. ಈಗ ನೋಡರ್ರಿ ಮೂಲ ಉದ್ಯೋಗ ಅದ ಅಡಗಿ ಮಾಡೊದಕ್ಕ ಮತ್ತ ಹೊಂಟಿನರ್ರಿ ಮೆಡಿಕಲ್ ಹಾಸ್ಟೆಲನವರು ಬಂದು ನೀನ ಅಡಗಿ ಮಾಡಾಕ ಬಾರವಾ ಅಂತ ಒತ್ತಾಯ ಮಾಡಿದ್ರು. ಹುಡುಗರ ಹೊಟ್ಟು ಮಾತ ಐತಿ ಅಂತ ಹೇಳಿ ಅಲ್ಲಿ ಹೊಕ್ಕನ್ರಿ. ಎರಡು ಮಾಡತಿನಿ ‘ ನಸಿಕಿನ್ಯಾಗ ಎದ್ದು ನನ್ನ ಮನಿ ಅಡಗಿ ಮಾಡಿ ಮುಂಜಾನೆ ಎಂಟಕ್ಕ ಹಾಸ್ಟೆಲ್ ಅಡಗಿ ಮಾಡಕೊಂಡ ಎರಡಕ್ಕ ಮನಿಗೆ ಬರತಿನಿ. ಬಂದ ಸ್ವಲ್ಪ ಊಟಾ ಮಾಡಿ ಮತ್ತ ಮೂರರಿಂದ ರಾತ್ರಿ ಒಂಬತ್ತರ ತನಕ ಆಟೋ ಹೊಡಿತಿನಿ ನೊಡ್ರಿ ಮೆಡಮರ್ರ ಅಂದಳು. ಅಬ್ಬಾ ದಿನ ಪೂರ್ತಿ ಇವಳ ದುಡಿತ ನೋಡಿ ನನಗೆ ಉಸಿರು ಕ್ಷಣ ಹೊತ್ತು ನಿಂತ ಹಾಗೆ ಆಗಿತು ನೀ ದುಡೊಯೊದರ ಮುಂದ ನಮ್ಮದ ಏನಿಲ್ಲ ಬಿಡಮ್ಮ ಅಂತಾ ಮನಸ್ಸಿನಲ್ಲೆ ಅಂದು ಕೊಂಡೆ. ಅವಳ ವೃತ್ತಿಯ ಅನುಭವವನ್ನು ಕೇಳಿದಾಗ ” ಮೆಡಮ ನನ್ನ ಮ್ಯಾಗ ಮನಿಯ್ಯಾಗ ಇರೊ ತಾಯಂದಿರಿಗಿ ಬಹಳ ವಿಶ್ವಾಸ ಐತ್ರಿ. ರಾತ್ರಿ ಹೊತ್ತನ್ಯಾಗ ಅವರು ಪೋನ ಮಾಡಿ ನನಗ ತಮ್ಮ ಹೆಣ್ಣು ಮಕ್ಕಳನ್ನ ಕರಕೊಂಡು ಹೋಗಿ ಕರಕೊಂಡು ಬಾ ಅಂತಾ ಪೋನ ಮಾಡಿ ಹೇಳತಾರ ನೊಡ್ರಿ. ಅವರಿಗೆ ಅಷ್ಟ ವಿಶ್ವಾಸ ಐತ್ರಿ ಎಂದಳು.ಹೆತ್ತವರಿಗೆ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯದು ತಂದು ಬಿಡುವದರ ಭರವಸೆ ಇವಳ ಮೇಲೆ ಇದೆ. ಹೆಣ್ಣು ಬರೀ ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ ಬೇರೆ ಹೆಣ್ಣುಗಳ ರಕ್ಷಣಿಯಲ್ಲಿಯೂ ಕೂಡಾ ಆಕೆ ಹಿಂದೆ ಸರಿದಿಲ್ಲ ಎನ್ನುವದಕ್ಕೆ ನಮಗೆ ಪ್ರಭಾ ಬಹಳ ಮುಖ್ಯವಾಗುತ್ತಾಳೆ. ಇಂದಿನ ದಿನಮಾನಗಳಲ್ಲಿ ಎಲ್ಲ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ದಾಪುಗಾಲು ಹಾಕುತ್ತಿರುವದನ್ನು ನಾವು ನೋಡುತ್ತಿದ್ದೇವೆ. ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುತ್ತಿದ್ದಾರೆ ಅದು ಯಾರ ಹಂಗು ಇರದೆ. ಇದು ಒಬ್ಬಳ ಕತೆಯಲ್ಲ ಇಂತಹ ಎಷ್ಟೊ ಜನ ಹೆಣ್ಣು ಮಕ್ಕಳು ಮುಂದೆ ಇದ್ದಾರೆ ಪ್ರಭಾ ಯಾಕೆ ಮುಖ್ಯಳಾಗುತ್ತಾಳೆ ಎಂದರೆ ಬೆಳಗಾವಿ ಅಂಥ ಮಹಾನಗರಿಯಲ್ಲಿ ಆಟೊ ಚಾಲಕಿ ಒಬ್ಬಳೆ ಅದು ಪ್ರಭಾ ಬಿಸಿರೊಟ್ಟಿ.ಎನ್ನುವದು ಹೆಮ್ಮೆಯ ವಿಷಯ ಅಲ್ವೆ.ಇವಳನ್ನು ಕಂಡ ಒಂದಿಬ್ಬರೂ ಕೂಡಾ ಈಗ ಆಟೊ ಚಲಿಸುವದನ್ನು ಕಲಿಯುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಳು.ಹೀಗೆ ಬೇರೆ ಹೆಣ್ಣು ಮಕ್ಕಳಿಗೆ ಅವಳು ಸ್ಪೂರ್ತಿಯಾಗುತ್ತಿರುವುದು ಎಲ್ಲರಿಗೂ ಖುಷಿ ಅಲ್ವೆ . ಕುಟುಂಬವನ್ನು ನಿರ್ವಹಿಸಿ ತಾನು ಗಂಡಿಗೆ ಏನು ಕಡಿಮೆಯಿಲ್ಲ ಬೆಳಗಿನಿಂದ ರಾತ್ರಿಯವರೆಗೆ ದುಡಿಯಬಲ್ಲೆ ಎಂಬುದನ್ನು ಸಾಬಿತು ಪಡಿಸಿದ ನಮ್ಮ ಮಾದರಿ ಹೆಣ್ಣುಮಗಳು ಪ್ರಭಾ. ಪ್ರಭಾ ಹೀಗೆ ಬೇರೆ ಸ್ತ್ರೀಯರಿಗೆ ನಿಮ್ಮ ಮಾರ್ಗದರ್ಶನ ಬಹಳ ಅಗತ್ಯ ಇದೆ ಒಳ್ಳೆಯದಾಗಲಿ. ದುಡಿಮೆಗೆ ಯಾವ ಕೆಲಸವೂ ಮೆಲಲ್ಲಾ ಯಾವ ಕೆಲಸವೂ ಕೀಳಲ್ಲ ಹ್ಯಾಟ್ಸಪ್ ಪ್ರಭಾ.

—————————

11 thoughts on “ನನ್ನ ಬದುಕು ನನ್ನ ಹೆಮ್ಮೆ(ಆಟೋ ಚಾಲಕಿ ಫ್ರಭಾ ಬದುಕಿನ ಚಿತ್ರಣ)ಡಾ.ಸುಜಾತಾ.ಸಿ

  1. ನಮ್ಮ ಮಹಿಳಾ ಕುಲಕ್ಕೆ ಒಂದು ಸಲಾಂ ಪ್ರಭಾವರಿಗೆ ವಿಶೇಷ ಸಲಾಂ ಇಂಥ ಸಾಧಕರನ್ನು ಪರಿಚಯಿಸಿದ ಲೇಖಕಿಯರಿಗೂ ಸಲಾಂ

  2. ಪ್ರಭಾರವರು ಮಹಿಳೆ ಅಬಲೆ ಅಲ್ಲ ಸಬಲೆ ಎಂದು ಸಾಬೀತು ಪಡಿಸಿದ್ದಾರೆ

Leave a Reply

Back To Top