ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ-
ನಿನ್ನಂತೆ ನಾನಾಗಬೇಕು.
ಎಲ್ಲವನ್ನ ಮರೆಸುವುದು ನಗು
ನಿನ್ನಂತೆ ನಾನಾಗಬೇಕು ಮಗು
ಯಾವುದೇ ಕಲ್ಮಶವಿಲ್ಲದ
ನಿನ್ನ ಮನಸು
ಚಂದಿರನಂತೆ ಹೊಳೆಯುತಿದೆ
ನಿನ್ನ ಸೊಗಸು
ನಿನ್ನೊಳಗಿಲ್ಲ ಯಾವುದೇ
ದ್ವೇಷ ಅಸೂಯೆ
ನಿನ್ನದು ಎಂದೆಂದೂ
ಪ್ರೀತಿಯ ನಿರೀಕ್ಷೆ
ಮಾಡುವೆ ನೀನು ಆಗಾಗ
ತಾಳ್ಮೆ ಪರೀಕ್ಷೆ
ಕೊಟ್ಟಷ್ಟು ಮಗೆ ಮಗೆದು
ಕೊಡುವೆ ನೀನು ಪ್ರೀತಿ
ಹಸಿದರಷ್ಟೇ ಅತ್ತು ಕರೆಯುವೆ ನೀನು
ಪುಟಿವ ಚೆಂಡಂತೆ ಓಡಾಡುತ್ತಿರುವೆ ನೀನು ಹುಣ್ಣಿಮೆಯ ಬೆಳಕಂತೆ ನೀನು
ಮನವ ಮುದಗೊಳಿಸುವೆ ನೀನು
ಯಾವುದೇ ಸಂಚಿಲ್ಲ ಕೇಡಿಲ್ಲ
ನಿನ್ನ ಮನಸ್ಸಿನಲ್ಲಿ
ಮುಗ್ಧತೆಯು ತುಂಬಿದೆ
ನಿನ್ನ ಬದುಕಿನಲಿ
ಎಲ್ಲವನ್ನೂ ನೋಡುವ
ತಿಳಿಯುವ
ಕಾತುರತೆ ನಿನ್ನಲ್ಲಿ
ಮರಳಿ ಮರಳಿ ಪ್ರಯತ್ನಿಸುವ
ಗುಣ ನಿನ್ನದು
ಮತ್ತೊಮ್ಮೆ ನಿನ್ನಂತೆ
ನಾನಾಗಬೇಕು
ಮನಸ್ಸಿನೊಳಗಡೆ ಶಾಂತಿ
ನೆಮ್ಮದಿ ನೆಲೆಸಿರಬೇಕು
ದ್ವೇಷ ಅಸೂಯೆಗಳ
ಅಳಿಸಿಬಿಡಬೇಕು
ಮಾನವೀಯ ಮೌಲ್ಯಗಳ
ತುಂಬಿಕೊಳ್ಳಬೇಕು
ಎಲ್ಲ ದೌರ್ಬಲ್ಯಗಳನ್ನು
ಮೀರಿ ನಿಲ್ಲಬೇಕು
ಸಂತನಲ್ಲದ ಸಂತನಂತೆ
ನಾನು ಬದುಕಬೇಕು
ನಾಗರಾಜ ಜಿ. ಎನ್. ಬಾಡ
ಮಗುವಿನ ಮನಸ್ಸು ಪರಿಶುದ್ಧ. ಮಗುವಿನಲ್ಲಿ ದೊಡ್ಡ ನಿರೀಕ್ಷೆಗಳು ಇರುವುದಿಲ್ಲ. ಭರವಸೆ, ನಗು,ತೊದಲು,ಹುಸಿನೋಟ ಮಾತ್ರ ಇರುತ್ತದೆ.ಎಲ್ಲವನ್ನೂ ಗೆಲ್ಲುವ ಕೌತುಕವಿರುತ್ತದೆ. ಮಗು ಮನೆಯ ನಗುವಿನಂತೆ. ಅಲ್ಲೊಂದು ಆರಾಧನೆಯ ಅಂತ:ಕರಣವಿರುತ್ತದೆ. ಮುಗ್ದತೆಯಿರುತ್ತದೆ. ಜೊತೆ ಸಾಗಿ ನಲಿವಾಗುವ ಹೊಸತನವಿರುತ್ತದೆ…….ಸಾಲುಗಳ ಭಾವ ಆಪ್ತವಾದವು….. ಅರ್ಥಪೂರ್ಣ ಕವನ ಚೆನ್ನಾಗಿದೆ
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ.
ಕುಮಟಾ…..