ಡಾ.ಬಸಮ್ಮ ಗಂಗನಳ್ಳಿ ಕವಿತೆ-ಭಾವ ಋಣ

ಯಾವ ಜನುಮದ ನಂಟೋ
ಇನ್ನಾವ ಸೆಳೆತವೋ ತಿಳಿಯದು
ಎಲ್ಲಿಯ ಋಣಾನುಬಂಧವೋ
ಮತ್ತಾವ ಭಾವ ಬಂಧನವೋ
ಕರೆಯುತಿದೆ ಮುರಲಿಯ ಗಾನ….

ಎಂದೂ ಕಾಣದ ಆನಂದವು
ಎಲ್ಲ ಜನುಮಕೂ ಸಾಗಲಿ
ಮತ್ತೆ ಕೋಗಿಲೆಯ ಸ್ವರವು
ಹೊಸವರುಷದ ಚಿಗುರನು
ಕಾದು ಮೆಲುವ ಮಾಗಿದ
ಸವಿಯು…

ಗಂಧ ತೀಡಿದಷ್ಟು ಕಂಪು
ಪಸರಿಸುವಂತೆ ಬದುಕು
ಸವೆದಷ್ಟೂ ಹಿತವಿರಬೇಕು
ಸ್ನಹಿತವಿಲ್ಲದ ಸ್ಹೇಹ ಸುಂದರ
ಪ್ರೀತಿಯ ಸುಳಿಗಾಳಿ ಸೂಸಲಿ
ನಿರಂತರ..

ನಾನು ನೀನೆಂಬ ಭಾವವಳಿದು
ಸಮತೆ ಸಮನ್ವಯ ಬರಲಿ
ಸಹನೆ ಶಾಂತಿಯಿಂದ ಗೆಲುವು
ಇರಲಿ ಒಂದಿಷ್ಟು ಅಂತಃಕರುಣೆ
ಮನೆ ಮನಗಳು ಮೇಳವಿಸಿ
ಪ್ರೇಮಗಾನವು..

ಈ ಬದುಕಿನ ಜಂಜಡದಿ
ಅಡಗಿರುವ ಸಮರಸವು
ಎಷ್ಟು ಸುಂದರ, ಸುಮಧುರ
ಆಳಕಿಳಿದಾಗಲೇ ಅಲ್ಲವೇ?
ಅಂತರಂಗದ ನಿಶ್ಯಬ್ದದ
ಅಲೆಗಳುಲಿವು..

ಸರಸ ವಿರಸದ ಬಾಳಿನಲಿ
ಸಮರಸದ ನವನೀತವಿದೆ
ಕಡೆದು ತೆಗೆಯಬೇಕದನು
ಭಾವನೆಯ ಹುಡುಕಾಟದಲಿ
ಇಹುದೊಂದು ಅರ್ಥವು ನಿಜದರಿವು…


One thought on “ಡಾ.ಬಸಮ್ಮ ಗಂಗನಳ್ಳಿ ಕವಿತೆ-ಭಾವ ಋಣ

Leave a Reply

Back To Top