ಚೈತ್ರಾ ವಿ ಮಾಲವಿ ಕವಿತೆ-ಯಾವ ಜನ್ಮದ ಮನವೋ..?

ಯಾವ ಜನ್ಮದ ಮನವೋ? ನೀನು
ನನ್ನ ಮನದಿ ಇಳಿದೆ ಏನು
ಯಾವ ಬಂಧನ ಬೆಸೆಯಿತೇನೋ..?
ನನ್ನ ನಿನ್ನಯ ಋಣವನು

ಹೂ ಮನದ ಮಲ್ಲಿಗೆ ನೀನು
ನನ್ನ ಹೃದಯದ ಒಲವೇ.ನೀ
ಹೂ ಮನದ ಮಲ್ಲಿಗೆ ನೀನು
ನನ್ನ ಹೃದಯದ ಒಲವೇ..ನೀ
ಒಡಲ ಒಳಗೆ ಸೇರದಿದ್ದರೂ..
ನನ್ನ ಮಡಿಲ ತಣಿಸಿದೆ..

ಯಾವ ಜನ್ಮದ ಮನವೋ? ನೀನು
ನನ್ನ ಮನದಿ ಇಳಿದೆ ಏನು
ಯಾವ ಬಂಧನ ಬೆಸೆಯಿತೇನೋ..?
ನನ್ನ ನಿನ್ನಯ ಋಣವನು

ಸ್ವಪ್ನ ಚಂದನದ.. ಒಳಗೂ
ನಿನ್ನ ಬಿಂಬವೂ ಬಯಸಿದೆ
ಬಯಕೆ ಅಲೆಗಳ ಮೌನ ಮಂಥನ
ಎಂದು ಅಳಿದು ಹೋಗುವುದೋ..?

ಯಾವ ಜನ್ಮದ ಮನವೋ? ನೀನು
ನನ್ನ ಮನದಿ ಇಳಿದೆ ಏನು
ಯಾವ ಬಂಧನ ಬೆಸೆಯಿತೇನೋ..?
ನನ್ನ ನಿನ್ನಯ ಋಣವನು

ಚೈತ್ರವಾಯಿತು ಜೀವ..ಹಾ
ಚೈತ್ರವಾಯಿತು ಜೀವವು
ನಿನ್ನ ನೆನಪುಗಳೇ ಚಂದನ
ಚೈತ್ರವಾಯಿತು ಜೀವವು
ನಿನ್ನ ನೆನಪುಗಳೇ ಚಂದನ
ಒಲವ ಮನವ ಬಿಟ್ಟು
ಇರುವುದೇ..ನಿನ್ನ ಪ್ರೇಮ.. ಬಂಧನ

ಯಾವ ಜನ್ಮದ ಮನವೋ? ನೀನು
ನನ್ನ ಮನದಿ ಇಳಿದೆ ಏನು
ಯಾವ ಬಂಧನ ಬೆಸೆಯಿತೇನೋ..?
ನನ್ನ ನಿನ್ನಯ ಋಣವನು.


Leave a Reply

Back To Top