ಸವಿತಾ ಮುದ್ಗಲ್ ಅವರ ಪುಸ್ತಕಗಳ ಲೋಕಾರ್ಪಣೆ

ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಶಾಖೆ ಹಾಗೂ ಕೊಪ್ಪಳ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಿರಂತರ ಪ್ರಕಾಶನ ಗದಗ, ಹೆಚ್.ಎಸ್.ಆರ್.ಎ. ಪ್ರಕಾಶನ ಅವರ ಸಹಯೋಗದಲ್ಲಿ ಕವಯತ್ರಿ ಶ್ರೀಮತಿ ಸವಿತಾ ಮುದ್ಗಲ್ ಅವರು ರಚಿಸಿದ ನೆರಳಿಗಂಟಿದ ಭಾವ ಹಾಗೂ ಕಥಾ ಸರೋವರ ಸಂಕಲನಗಳ ಲೋಕಾರ್ಪಣೆ ಸಮಾರಂಭವು ಕೊಪ್ಪಳದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿತು . ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ಪಂಚಾಯತ್ ಸಿ.ಎ.ಓ ಅಮೀನ್.ಮ.ಅತ್ತಾರ ಅವರು ಉದ್ಘಾಟನೆ ನೆರವೇರಿಸಿದರು. ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಬಿ.ಕೆ.ರವಿ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪಾಟೀಲ್ ಹೆರೂರು ವಹಿಸಿದ್ದರು .ನೆರಳಿಗಂಟಿದ ಭಾವ ಕುರಿತು ಗುಂಡೂರು ಪವನ್ ಕುಮಾರ್ ಹಾಗೂ ಕಥಾ ಸರೋವರ ಕುರಿತು ಲಿಂಗಾರಡ್ಡಿ ಆಲೂರು ಅವರು ಅನುಸಂಧಾನ ಮಾಡಿದರು . ಕವಯತ್ರಿ ಶ್ರೀಮತಿ ಸವಿತಾ ಮುದ್ಗಲ್, ಕೊಪ್ಪಳ ತಾಲೂಕಾ ಕಸಾಪ ಅಧ್ಯಕ್ಷ ರಾಮಚಂದ್ರಗೌಡ ಬಿ ಗೊಂಡಬಾಳ ಉಪಸ್ಥಿತರಿದ್ದರು . ಈ ಕಾರ್ಯಕ್ರಮದಲ್ಲಿ ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಶಾಖೆಯ ಅಧ್ಯಕ್ಷೆ ಶ್ರೀಮತಿ ಮುಮ್ತಾಜ್ ಬೇಗಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಲೇಖಕಿಯರು, ಸಾಹಿತಿಗಳು, ಕನ್ನಡ ಅಭಿಮಾನಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸರ್ವರಿಗೂ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಘಟಕಕ್ಕೆ, ನಿರಂತರ ಪ್ರಕಾಶನ, H S R A ಪ್ರಕಾಶನ ಇವರಿಗೆಲ್ಲ ಕಲೇಸಂ ವತಿಯಿಂದ ಧನ್ಯವಾದಗಳು.

ಕಥಾ ಸರೋವರ.
ಕಥಾ ಸಂಕಲನ
ಪ್ರಕಾಶನ :HSRA ಪ್ರಕಾಶನ, ಬೆಂಗಳೂರು

ಅಡ್ರೆಸ್ :
ಸವಿತಾ ಮುದ್ಗಲ್
ಗಂ/ಉದಯ ರವಿ
ರಾಜಪ್ಪ ಕಾಲೋನಿ
ಚೈತನ್ಯ ಶಾಲೆ ಹತ್ತಿರ
ವಡ್ಡರಹಟ್ಟಿ
ಗಂಗಾವತಿ -583227
ಕೊಪ್ಪಳ ಜಿಲ್ಲೆ

ಪುಸ್ತಕ ಪಡೆಯಲು 7760797678 ನಂಬರ್ಗೆ ಮೆಸೇಜ್ ಮಾಡಿ

*********************

ನೆರಳಿಗಂಟಿದ ಭಾವ
 ಕವನ ಸಂಕಲನ
ಪ್ರಕಾಶಕರು :ನಿರಂತರ ಪ್ರಕಾಶನ, ಗದಗ

ಅಡ್ರೆಸ್ :
ಸವಿತಾ ಮುದ್ಗಲ್
ಗಂ/ಉದಯ ರವಿ
ರಾಜಪ್ಪ ಕಾಲೋನಿ
ಚೈತನ್ಯ ಶಾಲೆ ಹತ್ತಿರ
ವಡ್ಡರಹಟ್ಟಿ
ಗಂಗಾವತಿ -583227
ಕೊಪ್ಪಳ ಜಿಲ್ಲೆ

ಪುಸ್ತಕ ಪಡೆಯಲು 7760797678 ನಂಬರ್ಗೆ ಮೆಸೇಜ್ ಮಾಡಿ


2 thoughts on “ಸವಿತಾ ಮುದ್ಗಲ್ ಅವರ ಪುಸ್ತಕಗಳ ಲೋಕಾರ್ಪಣೆ

  1. ಕೃತಿ ಲೋಕಾರ್ಪಣೆ ಪ್ರಕಟಣೆ ಮಾಡಿದ್ದಕ್ಕೆ ಧನ್ಯವಾದಗಳು ಸರ್, ಸಂಗಾತಿ ಬಳಗಕ್ಕೆ ಹೃದಯದ ಒಡಲಿಂದ ವಂದನೆಗಳು

  2. ಯುವ ಭರವಸೆಯ ಕವಯಿತ್ರಿ ಕಥೆಗಾರ್ತಿ ಸವಿತಾ ಮುದ್ಗಲ್ ಅವರು ನಿರಂತರ ಪ್ರಕಾಶನ, ಎಚ್ ಎಸ್ ಆರ್ ಎ ಪ್ರಕಾಶನದ ಮೂಲಕ ಪ್ರಕಟಿಸಿ ಜನಾರ್ಪಣೆ ಮಾಡುವ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶಿಕೆ ಪಡೆದಿದ್ದಕ್ಕೆ ಹಾರ್ಧಿಕ ಅಭಿನಂದನೆಗಳು
    ಮುದ್ಗಲ್ ಪರಿಸರದ ಪ್ರತಿ ಕಲ್ಲು ಕಲ್ಲಿನಲ್ಲೂ ಹೊಸ ಕಥೆಯ ಕಥಾ ವಸ್ತು ಗಳು ಸಿಗುತ್ತವೆ.
    ಬಿಸಿಲು ನಾಡಿನ ಬದುಕಿನ ಅನಾವರಣ ವನ್ನು ಕಾವ್ಯ,ಕಥೆ, ಗದ್ಯ ಸಾಹಿತ್ಯದ ಮೂಲಕ ರಚನೆ ಮಾಡಲೆಂದು ಶುಭ ಕೋರುವೆ

    ಎ ಎಸ್. ಮಕಾನದಾರ ಗದಗ

Leave a Reply

Back To Top