ಗಂಗಾಧರ ಅವಟೇರ ಕವಿತೆ-ಮರವಾಗು ಮನುಜ !

ಬೀಜಗಳು ಮರವಾಗಿ ಬೆಳೆದರು
ನೆಲದ ಆಸರೆ ಮರೆಯುವುದಿಲ್ಲ.

ಮರಗಳು ಗಗನ ಚುಂಬಿಸಿ ಬೆಳೆದರು
ನೆಲದ ನೀರು ಹೀರುವುದು ಬಿಡುವುದಿಲ್ಲ.

ಕಾಂಡವ ಕಡಿದು ತುಂಡು ಮಾಡಿದರು
ಚಿಗುರುವ ಜಿಗುಟುತನ ಗುಣ ಕಳೆದುಕೊಳ್ಳುದಿಲ್ಲ.

ಮರಕೆ ಕಲ್ಲು ಎಸೆದರು ದ್ವೇಷ ಮಾಡುವುದಿಲ್ಲ
ಅದು ಕಲ್ಲು ಎಸದವರಿಗೂ ಹಣ್ಣು ಕೊಡುವುದು.

ಗಾಳಿ,ಬಿಸಿಲು,ನೀರೆರೆದ ದೇವಗೆ ಕತ್ತೆತ್ತಿ ನಮಿಸುವುದು
ತನ್ನಗೆ ಜನ್ಮವಿತ್ತ ಭೂದೇವಿಗೆ ಭಾಗಿಸುವುದು ಶಿರವ.

ಮರವಾಗು ಮನುಜ ನೀನೂನು !

ಮರದ ಗುಣವು ಬರಲಿ ನಿನಗು !


5 thoughts on “ಗಂಗಾಧರ ಅವಟೇರ ಕವಿತೆ-ಮರವಾಗು ಮನುಜ !

  1. ಉತ್ತಮ ಸಂದೇಶವನ್ನು ಒಳಗೊಂಡ ನಿಮ್ಮ ಕವನ ಚೆನ್ನಾಗಿದೆ.

  2. ಗುರುಗಳೇ ಮುಂಜಾವಿನ ಎಳೆ ಬಿಸಿಲಿನಲ್ಲಿ ಸೂರ್ಯನ ಕಿರಣಗಳು ರಂಗು ರಂಗಿನ ಚಿತ್ತಾರದ ಬಾನಂಗಳದಿಂದ ತೇಲುತ್ತಾ ಕುಣಿಯುತ್ತ ಸಂಗಾತಿ ಕವನ ಮೂಡಿ ಬಂದಿದೆ. ಶ್ರೀ ಗಂಗಾಧರ ಅವಟೆರ ಇನ್ನು ತಮ್ಮಿಂದ ಹೊಸ ಹೊಸ ಕವಿತೆಗಳನ್ನು ಈ ನಾಡಿನ ಯುವಕರಿಗೆ ಅರ್ಪಿಸುತ್ತಾ ಇರಬೇಕೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.. ಈ ಶುಭ ಸಂದರ್ಭದಲ್ಲಿ ತಮಗೆ ಅಭಿನಂದನೆಗಳು

Leave a Reply

Back To Top