ಕಾವ್ಯಸಂಗಾತಿ
ಡಾ.ಶಾರದಾಮಣಿ. ಹುನಶಾಳ
ಹೊಂಗನಸು
ನಸುಕಾಗಿ ತುಸುಹೊತ್ತು
ಕಳೆದು ಹೋಯ್ತು
ಭಾಸ್ಕರನ ಹೊಂಗಿರಣದಿ
ಬಾನು ಬೆಳಗಿ ಹೋಯ್ತು
ಮಂಜಿನಲಿ ಮುಸುಕಿದಾ
ಈ ಧರೆಯ ಮಡಿಲಿನಲ್ಲಿ
ಇಬ್ಬನಿಯ ಹನಿಯೊಂದು
ಹೊಳೆದು ಹೋಯ್ತು.
ಜೀವಜ್ಯೋತಿ, ಈ ಜಗವೆಲ್ಲ
ಬೆಳಗಿ,
ಇಳೆಯನ್ನ ಸರಿಸಿ ಹೋಯ್ತು
ಹೊಸದೊಂದು ಹೊಂಗನಸು
ತುಸುಕಾಲ ಮೈಮರೆಸಿ
ರೆಪ್ಪೆಯ ಅಂಚಿನಲಿ ಸರಿದು ಹೋಯ್ತು
ಸರಿದ ಕನಸಿನ ಹಿಂದೆ ಇನ್ನೊಂದು
ಹೊಸ ಕನಸು, ಹೊಸಸ್ಪೂರ್ತಿ,
ಬೆರೆತು ಹೋಯ್ತು..
ಹೊಸ ಕವಿತೆ,ಹೊಸ ಸಾಲು
ಹಾಡಿ ಹಾಡಿ..
ಹೊಸದೊಂದು ಹೂನಗೆ
ಮೂಡಿಬಂತು,ಮೌನದ
ಮಾತೊಂದು ಕೇಳಿ ಬಂತು.
ಮರೆತ ಕನಸನ ನೆನೆ ನೆನೆದು
ತುಟಿ ಅಂಚಿನದಿ ಕಿರುನಗೆ ತೇಲಿಬಂತು.
ಮನದಲ್ಲಿ ಸ್ಪುರಿಸಿತು ಹೊಸ ಭಾವನೆ,
ಕವಿತೆಯ ಸಾಲಾಗಿ ಮೂಡಿಬಂತು..
ಡಾ.ಶಾರದಾಮಣಿ. ಹುನಶಾಳ
ಹೊಂಗನಸು… ಅರಳಿದ ರೀತಿ ನಿಮ್ಮ ಕವನದಲ್ಲಿ ಚೆನ್ನಾಗಿ ಮೂಡಿಬಂದಿದೆ
ಸುಶಿ
ಅತ್ಯುತ್ತಮ ಅತ್ಯುತ್ತ