ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಬರುವುದೆಲ್ಲವೂ ಬರಲಿ ಬಿಡು
ನಂಬಿಕೆಯ ತಳಹದಿ ಅಲುಗಿದರೇನು
ಬೆಂಬಿಡದ ಬವಣೆಗಳು ಕಾಡಿದರೇನು
ಒಣಜಂಬ ವೇದಾಂತ ಬಡಾಯಿಗಳು
ಅಂತರಂಗ ಹೊಕ್ಕಿರಲು ಕಲ್ಮಶಗಳು
ಸತ್ಯದ ತಲೆ ಮೇಲೊಡೆದ ಮಿಥ್ಯ ಮೋಹಕಗಳು
ಜೀವದಲಿ ತಲ್ಲಣಗಳ ಸೃಷ್ಟಿಸುವ ಭಾವ
ಬರುವುದೆಲ್ಲವೂ ಬರಲಿ ಬಿಡು ಮನವೆ
ತಳೆದು ಬಿಡು ತೊರೆದೆಲ್ಲವ ನೀ ನಿರ್ಭಾವ
ನಿನ್ನೆ ನಾಳೆಗಳಿಗೂ ಪ್ರಶ್ನೆಯಾಗೇ ಉಳಿದುದ
ಇದ್ದು ಇರದುದರ ನಡುವೆ ಕಾಡುವ ಸಂವೇದನೆಯ
ಮುಂಗಾರಿಗಾಗಿ ಕಾಯ್ದ ಧರಣಿಯೊಡಲು
ಮಿಂಚು,ಗುಡುಗು,ಮಳೆ ಹನಿಗಳ ಸ್ಪರ್ಶಕೆ
ಹಂಬಲಿಸಿ ಕಾತರದಿ, ತರಾತುರಿಯಲಿ ಮೈಯ್ಯೊಡ್ಡಿದಂತೆ
ಹಸಿಕಾಣದೆ ತನುವಿರದೆ ನಲುಗಿದ ಗಿಡಗೆಂಟೆ
ಮೊದಲ ಮಳೆಹನಿಗೆ ಮೈ ದುಂಬಿ ನಲಿಯದಿರದೆ
ಹೊಸ ಬೆಸುಗೆ ಬೆಸೆದ ಹಳತುಗಳೆಲ್ಲವೂ
ಕೊಳೆತ ಕಡತಗಳಂತೆ ಧೂಳಿಡಿದ ಶಾಸನದಂತೆ
ಗೊಂದಲಗಳೇ ಮೇಲುಗೈ ಸಾಧಿಸಲು
ಹಲವು ವೈಚಿತ್ರ್ಯಗಳಿಗೆ ನಾಂದಿ ಹಾಡುತಿರಲು
ಬರುವುದೆಲ್ಲವೂ ಬರಲಿ ಬಿಡು ಸ್ಟಿತಪ್ರಜ್ಞಳಂತಿರು
ಮಾಲಾ ಚೆಲುವನಹಳ್ಳಿ
ಬದುಕಿನಲ್ಲಿ ಬರುವ ಎಲ್ಲಾ ಏರಿತಗಳು
ದು;ಖ ದುಮ್ಮಾನಗಳು ಎಡರು ತೊಡರುಗಳಿಗೆ
ಸ್ಪಂದಿಸದೆ ಮನಸ್ಸೇ ನೀನು ಸ್ಥಿತಪ್ರಜ್ಞನಂತಿರು
ಎನ್ನುವ ತಮ್ಮ ಕವನ ಫಲಪ್ರದವಾಗಿದೆ.
೦೦೦೦೦
ಜಿ.ಎಸ್.ಪ್ರಕಾಶ್,ಬೆಂಗಳೂರು.
ತುಂಬಾ ಧನ್ಯವಾದಗಳು ಸರ್ ತಮ್ಮ ವಿಮರ್ಶೆಯೇ ಮನಕ್ಕೆ ಮತ್ತಷ್ಟು ಚೇತನ ತುಂಬಿದೆ