ಕಾವ್ಯಸಂಗಾತಿ
ಮಲ್ಲಿಕಾರ್ಜುನ ಪಾಟೀಲ
ಮುಂಗಾರು ಮಳೆ
ಮುಂಗಾರಿನ ಮೋಡ ಒಂದಾಗಲಿ
ಮೊದಮೊದಲ ಸೋನೆಮಳೆ ಸುರಿಯಲಿ
ವರುಷ ಧರೆಯಲಿ ಪ್ರೇಮ ಭಾವ ಮೊಳೆಯಲಿ
ಮುಂಗಾರುಮಳೆಯ ಹೊಂಗಿರಣ
ರೈತರ ಬಾಳಿಗೆ ಆಶಾಕಿರಣ
ಬಿತ್ತನೆಗೆ ಮುಂದಾದ ರೈತ ಶಿವಶರಣ
ಮುಂಗಾರುಮಳೆ ತಂದರೆ ಸಮೃದ್ಧ ಬೆಳೆ
ಕಿತ್ತೆಸೆದಂತೆ ಕಷ್ಟವೆಂಬ ವಿಷದ ಕಳೆ
ಆಗಲೇ ರೈತರ ಮೊಗದಲ್ಲಿ ಜೀವಕಳೆ
ತುಂತುರು ಹನಿಗಳ ಮಳೆಯಲಿ
ತುಂಬಿಸಿ ಹಸಿರನ್ನು ವಸುಧೆಯಲಿ
ತೋರಿತು ಸ್ವರ್ಗವ ಸೆರಗಿನಲ್ಲಿ
ಮಲ್ಲಿಕಾರ್ಜುನ ಪಾಟೀಲ
So nice ri sir