ಕಾವ್ಯ ಸಂಗಾತಿ
ಮುತ್ತು ಬಳ್ಳಾ ಕಮತಪುರ ಕವಿತೆ


ಗಜಲ್*
ಮನದೊಳಗೆ ಹೂ ನಗೆಯ ಮೌನ ಉರಿದಂತೆ
ಇಹದ ಪರಿಮಳದ ನಯನ ಹಲವು ಮಿಡಿದಂತೆ
ಜಾರಿ ಬಿದ್ದ ಕಣ್ಣಹನಿಗೆ ಹೂ ಪ್ರೇಮ ನುಡಿದಂತೆ
ತೇಲಿ ಬಂದ ದುಃಖ ಸಿಡಿಲ ಹಾದಿಯ ತೆರದಂತೆ
ಅವಳ ಕಣ್ಣ ಬಟ್ಟಲು ಎದೆಯ ಕದ ಮುರಿದಂತೆ
ಕಡಲ ಚಾಪಿ ಅನುಪಲ್ಲವಿ ಮುಕ್ತ ದಾಟಿಯಂತೆ
ಮುಂಗುರುಳು ಭಾವ ಹಸಿಗೊಳಿಸಿ ಹರಿದಂತೆ
ನೀ ಮುಡಿದ ಮಲ್ಲಿಗೆ ಸುಗಂಧ ನಾ ತಬ್ಬಿದಂತೆ
ಹೋದ ದಾರಿಯಲಿ ಮುತ್ತುಗಳು ಕಳೆದಂತೆ
ಸುರುಳಿ ಬಳ್ಳಿ ಮೋಹಕದ ಜಡೆಗೆ ಮುಡಿದಂತೆ
ಮುತ್ತು ಬಳ್ಳಾ ಕಮತಪುರ

Tq sr