ಶಾಂತಲಾ ಮಧು ಕವಿತೆ-ಸಮಾಧಿ

ತದನಂತರ ಧಾರಣ
ಧ್ಯಾನ ಸಮಾಧಿ

ಮೊಟ್ಟೆ ಒಡೆದು
ಮರಿ ಹೊರಬಂದಂತೆ
ಕವಚ ಕಟ್ಟಿದ
ಸುಖದ ಕ್ಷಣಗಳು
ಪಟ ಪಟನೆಬಿರಿದು
ಚಟಪಟಿಸಿ ಬೆಳಕ
ಲೋಕವ ಕಂಡು
ಕತ್ತಲೆಯ ಅನುಭವಿಸಿ

ಪ್ರತಿ ಹೆಜ್ಜೆಗು ಹುಡುಕಾಟ
ಕಲಿಕೆ ಕನಸಿನ ಸರಸ
ಕೈ ಚಾಚಿ ಆಗಸಕೆ
ಬಾಚಿ ತಬ್ಬುವೆ
ಸುಖವ ನಾನೆನುತ
ಮೈ ಮರೆತು
ಮರೆತು ಬಾಲ್ಯ, ಹರೆಯದ
ಹದ ಮಧುರ ಸಿರಿ ಬದುಕ

ಮರು ಬದುಕು
ಪ್ರೀತಿ ಪ್ರೇಮದ ಆಟ
ಆಟ ಚುಂಬನ ಚಮತ್ಕಾರ
ಸ್ವಾರ್ಥ ಕಗ್ಗಂಟನಲಿ ಸಿಲುಕಿ
ಧಾರಣ ವಿಲ್ಲದ
ಪೂಜೆ ಇಲ್ಲದ ನೈವ್ಯೆದ್ಯ

ಮರೆತ ಧಾರಣ ಧ್ಯಾನ ವೈಭವ
ಬೆಟ್ಟದಂಚಿನ
ಶಿಖರ ಕೊನೆಯಲಿ
ಹೊರಗೆ ಕತ್ತಲು ಕವಿಯೆ
ಒಳಗಬೆಳಕದು ಬೆಳಗಿ
ಬೆಳಕಾಗಿ
ಆಗಿ
ಧಾರಣ ಧ್ಯಾನ
ಸಮಾಧಿ
ಸಂಭ್ರಮ
ತದನಂತರ ನಂತರ
ತಾನೆ ತಾನಗಿ
ತರಗೆಲೆಯಂತಾಗಿ
ಆಗಿ……

Leave a Reply

Back To Top