ವೀಣಾ ಹೇಮಂತ್ ಗೌಡ ಪಾಟೀಲ್ ಕವಿತೆ- ತ್ರಿಶಂಕು ಸ್ಥಿತಿ

ಇದು ನಮಗೆ ಪ್ರಕೃತಿ, ನೀಡಿರುವ ವಿಕೃತಿ
ನಮ್ಮದಲ್ಲದ ತಪ್ಪಿಗೆ ಒಪ್ಪದಿಹ ಒಪ್ಪಿಗೆ
ಅರ್ಧನಾರೀಶ್ವರನ ಪೂಜಿಸಿ ನಮ್ಮನು ನಿರಾಕರಿಸುವಿರಿ

ಪ್ರಾಣಿಗಳ ಅಪ್ಪಿ ಮುದ್ದಾಡುವಿರಿ ನೀವು
ಹೇಸಿಗೆಯಂತೆ ಕಾಣುವಿರಿ ನಮ್ಮನು ನೀವು
ಪ್ರಾಣಿಗಿಂತ ಕೀಳೆ ನಾವು ಇದು ನಿಮಗೆ ಸಮ್ಮತವೇ

ನಮ್ಮಂತವರಿಗೆ ನಾವೇ ಸಂಸಾರ, ಉಳಿದವರಿಗೆ ಸಸಾರ
ಮಾಡ್ತಿವಂದ್ರು ಕೆಲ್ಸ ಇಲ್ಲ, ತಿನ್ನೋಕ್ ಅನ್ನ ಇಲ್ಲ

ಬದುಕಬೇಕೆನ್ನುವ ಛಲಕ್ಕೆ ಹೊಡಿತೀವಿ ಜಗಕೆ ಸಡ್ಡು

ನಮ್ಮನ್ನು ಪ್ರೀತಿಸೊಲ್ವಾ ಪರವಿಲ್ಲ, ಅಸಹ್ಯ ಪಡದಿರಿ
ನಮ್ಮ ದೇಹದ ಊನ ಕಾಣದವರು
ಅರಿಯುವಿರೆ ನಮ್ಮ ಮನದ ನೋವು


Leave a Reply

Back To Top