ಕಾವ್ಯ ಸಂಗಾತಿ
ಮೂಗುದಾರ
ಕಣ್ಣ ಕಣ್ಣ ನೋಟ
ಮನವ ಸೆಳೆಯುವ
ಮೈ ಮಾಟ
ಮಾಮರದಿ ಚಿಗುರು ತಿನ್ನುತ
ಸವಿಯ
ಆಸ್ವಾದಿಸುತ್ತಾ
ಕೂss ಕೂss ಕೂsss
ಕೋಗಿಲೆ ಗಾನ
ಎದೆಯ ಮೀಟಿದೆ
ಹೊಸದೆನೋ ನುಡಿದಿದೆ
ಕೈ ಬೀಸಿ ಕರೆಯುವ
ಕಬ್ಬಿನ ತೋಟ
ಬೀಸೋ ತಂಗಾಳಿ
ಮೈ ಮನದಿ ಏನೋ
ರೋಮಾಂಚನ
ನೀರು ಬಿಡುತ್ತಿದ್ದ
ಬೀರ ಪುss ಪುss
ಎಂದು ಎಲೆ ಅಡಿಕೆ ಜಗಿದು
ಉಗಿಯುತ್ತಿದ್ದ
ಆತನ ಅಲಕ್ಷತನಕ್ಕೆ
ಎಲ್ಲೆಲ್ಲೋ ಹರಿದು
ಹೋಗುತ್ತಿದ್ದ ನೀರು
ತೋಟದ ತುಂಬ ಅಸ್ತವ್ಯಸ್ತ
ಹಿಡಿದಿಟ್ಟು ಕೊಳ್ಳ ಬೇಕು
ಪೋಲಾಗುವ ಮೊದಲು
ಅಲ್ಲಲ್ಲಿ ಬಿದ್ದ ಕಸದ
ರಾಶಿ ರಾಶಿ
ಸ್ವಚ್ಛ ಗೊಳಿಸಬೇಕು
ಒಪ್ಪ ಒರಣ ಇದ್ದಾಗಲೇ
ಬದುಕಿಗೊಂದು ಲಯ
ಹುಚ್ಚೆದ್ದು ಕುಣಿವ ಕುದುರೆಗೆ
ಹಾಕ ಬೇಕು ಮೂಗುದಾರ
ಸೂತ್ರ ವಿದ್ದಾಗಲೇ ಎಲ್ಲವೂ ಸುಸೂತ್ರ
ನಾಗರಾಜ ಜಿ. ಎನ್. ಬಾಡ
ಅದ್ಬುತವಾಗಿದೆ