ಕಾವ್ಯ ಸಂಗಾತಿ
ಲೋಹಿತೇಶ್ವರಿ ಎಸ್ ಪಿ.

ಸುಂದರ ಸುಳ್ಳುಗಳು

ಮೊದಮೊದಲು ಎಲ್ಲವೂ
ಸೊಗಸಾಗಿ ಸಾಗುತಿತ್ತು
ಹರಿಯುವ ನದಿಯಂತೆ
ಸುಂದರ ತಾವರೆಯಂತೆ
ಜೇನಿನ ಹನಿಯಂತೆ
ಪ್ರೀತಿಯ ಅಮಲಿನಲಿ
ಸ್ನೇಹದ ಕಡಲಿನಲಿ
ಸುಂದರ ಅನುಭೂತಿಯಲಿ
ಭುವಿಯ ಸ್ವರ್ಗದಲಿ
ರಾಗದ ರಚನೆಯಲಿ
ಸುಳ್ಳಿನ ಸರಮಾಲೆಯನೆ
ಜೀವನದಿ ಅರ್ಪಿಸಿ
ಭುವಿ ಬಾನಿನ ಅಂತರದಿ
ಸುಳ್ಳಿನ ರಂಗವಲ್ಲಿಯ
ಸೂಸಿದ ಸೊಗಸಾದ…..
ಈಗೀಗ ಸತ್ಯದ ಛಾಯೆ
ಕಣ್ಣಿಗೆ ಎದುರಾಗಿದೆ
ಸುಂದರ ಸುಳ್ಳುಗಳ
ಬುನಾದಿ ಹಾಕಿ
ಒಲವಿನ ಸಸಿನೆಟ್ಟು……..
ಸುಳ್ಳಿನ ಕಂತೆಯ
ನೆರಳಲಿ ಅರಳಿದ
ಒಲವಿನ ಹೂವು
ಎಂದಿಗೂ….
ಅಲ್ಪಾಯುಷಿಯೇ…..
————————–
ಲೋಹಿತೇಶ್ವರಿ ಎಸ್ ಪಿ

Nice