ಮರುಳಸಿದ್ದಪ್ಪ ದೊಡ್ಡಮನಿ-ಕನಕನಿಗೆ

ಕಾವ್ಯಸಂಗಾತಿ

ಮರುಳಸಿದ್ದಪ್ಪ ದೊಡ್ಡಮನಿ-

ಕನಕನಿಗೆ

ಬಾಡ ಧರೆಯ ದೊರೆಯ ಸುತ ಎಂದೂ ಬಾಡದ ಹೂವು ಕನಕ
ಮಾಡುವೆ ನಮನ ಕೊನೆತನಕ

ಜಾತಿ ಹಿಂಡನಗಲಿದ
ಗಂಡೆದೆ ಗುಂಡಿಗೆಯ
ಕನಕ ಮಾಡುವೆ ನಮನ ಕೊನೆತನಕ

ಸತ್ಯದ ಹಾದಿಯಲಿ ನಿತ್ಯ ಭಜಿಸುತ ಭವ ಬಂಧನ ತೊರೆದೆ ಕನಕ ಮಾಡುವೆ ನಮನ ಕೊನೆತನಕ

ದುರುಳರ ಕಣ್ಣು ತೆರೆಸಿ ಜಾತಿ
ಜ್ಯಾಡ್ಯವ ಬಿಡಿಸಿ ಮನಜ ಮತದ ಪ್ರೀತಿಯ ಅಮೃತ ಉಣಿಸಿದ ನಿನಗೆ ಕನಕ ಮಾಡುವೆ ನಮನ ಕೊನೆತನಕ

ನಾನೆಂಬುದನಳಿದೆ ಒಳಿತನ್ನೆ ಬಾಳಿದೆ ಬಾಲ ಬಡುಕರ ಬಾಯಿಗೆ ಬೀಗ ಹಾಕಿದ ನಿನಗೆ ಕನಕ ಮಾಡುವೆ ನಮನ ಕೊನೆತನಕ

ಹಿಂಡನಗಲಿ ಗಂಡುಗಲಿಯಾಗಿ ಜಗದೊಳು ಜ್ಞಾನದ ಬೇಳಕು
ಹರಿಸಿ ಅಜ್ಞಾನದ ಕೊಳೆ ತೊಳೆದ ನಿನಗೆ ಕನಕ ಮಾಡುವೆ ನಮನ ಕೊನೆತನಕ.


ಮರುಳಸಿದ್ದಪ್ಪ ದೊಡ್ಡಮನಿ

Leave a Reply

Back To Top