ಕಾವ್ಯ ಸಂಗಾತಿ
ಅಮರೇಶ ಎಂಕೆ
ಗಜಲ್
ಹರಿದ ಕಣ್ಣೀರು ಕೆನ್ನೆಗೆ ನೆನಪಿರದಿದ್ದರೆ ಕೈಬೆರಳಿಗೆ ಕೇಳು
ಬಿಕ್ಕಿದ ಭಾವಗಳು ಅತ್ತು ಸುಮ್ಮನಾಗಿದ್ದರೆ ಕೊರಳಿಗೆ ಕೇಳು
ಸೋಲುಗಳ ಮೂಟೆ ಕಟ್ಟಿಕೊಂಡು ಮೈಲುಗಲ್ಲು ಎಣೆಸುತಿರುವೆ
ಧೂಳಿನ ಕಣ ಕಣಗಳು ದೂರವಾಗಿದ್ದರೆ ಕಲ್ಲು ಮರಳಿಗೆ ಕೇಳು
ಉದುರುವ ಎಲೆಗಳನ್ನು ಎಣೆಸಿ ಜೊತೆಗೆ ಖುಷಿಪಟ್ಟ ಮನಸಿದು
ಹಸಿರೆಲೆ ಚಿಗುರಲು ರೆಂಬೆಕೊಂಬೆಗಳು ಮರೆತಿದ್ದರೆ ಇಂಚರಗಳಿಗೆ ಕೇಳು
ಸುಕ್ಕುಗಟ್ಟಿದ ಚರ್ಮ ನಗಾರಿಯಾದರೆ ಸಾಕೆಂದು ಕಾಯುತ್ತಿದೆ
ಹೊಮ್ಮುವ ನಾದದಲ್ಲಿ ತಾಳವಿರದಿದ್ದರೆ ಹರಿದ ಕರುಳಿಗೆ ಕೇಳು
ಜಡಿಮಳೆ ಯಾಕೋ ‘ಅಮರ’ನ ಆಸೆಗಳ ಕಡೆ ಹೊರಟಿದೆ
ಸುರಿದ ಹನಿಗಳ ಲೆಕ್ಕ ಸಿಗದಿದ್ದರೆ ಹರಿವ ತೊರೆಗಳಿಗೆ ಕೇಳು
ಅಮರೇಶ ಎಂಕೆ
Nice amaresh