ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ ಸಂಗಾತಿ

ಅಂತಃಕರಣ ಮತ್ತು ಪ್ರೀತಿ ಧಾರೆ

ಎರೆಯುವವರಿಗೆ ಪ್ರತಿಬಿಂಬ ನಾವಾಗೋಣ-

ಮಾಲಾ. ಕಮಲಾಪೂರಕರ್

ಜೀವನದಲ್ಲಿ ನಾವು ಹುಟ್ಟಿದಾಗಿನಿಂದ ತಾಯಿ ತಂದೆ, ಒಡಹುಟ್ಟಿದವರು,ಬಂಧು, ಮಿತ್ರರರ ಭಾಂದವ್ಯ ಇದ್ದೆಇರುತ್ತದೆ, ಅದರಲ್ಲಿಯೂ ತಂದೆ, ತಾಯಿ ಪ್ರೀತಿ ವಿಶ್ವಾಸ ಅಂತಃಕರಣಕ್ಕೆ ಬೆಲೆಯೇ ಕಟ್ಟಲು ಸಾಧ್ಯ ಇಲ್ಲ, ಅವರು ನಮ್ಮ ಮೇಲೆ ಇಟ್ಟಿರುವ  ಅಂತಃಕರಣಕ್ಕೆ  ನಾವು ಧಾರೆ ಎರೆಯುವುದೆಂದರೆ ವಿಶ್ವಾಸ,   ಪ್ರೀತಿ ಸೌಜನ್ಯತೆ ಇಡುವುದೇ ದೊಡ್ಡ ಮಹತ್ತರ ಕಾರ್ಯ.

ಇತ್ತೀಚಿನ ದಿನಗಳಲ್ಲಿ  ಬಂಧುಗಳನ್ನು ಪ್ರೀತಿಯಿಂದ ಸಂಬಂಧ ಬೆಳೆಸಿದರೂ ತುಂಬಾ ಕೃತಕ ಜೀವನಕ್ಕೆ ಹೊಂದಿದವರು, ಸ್ವಾರ್ಥಿಗಳು ಈ ಒಂದು ಬಾಂಧವ್ಯವನ್ನು ನಿರ್ಲಕ್ಷಿಸುತ್ತಾರೆ, ಎಲ್ಲವೂ ಫಾರ್ಮೆಲಿಟಿಗಾಗಿ  ತಮ್ಮ ಶೋ ತೋರಿಸಿ ಮುಗಿಸುತ್ತಾರೆ. ನಮಗಾಗಿ ಹಂಬಲಿಸಿ ನಮ್ಮವರೆನುವ ಅಭಿಮಾನಕ್ಕೂ ಬೆಲೆ ಕೊಡದೆ ಹೋಗುತ್ತೇವೆ. ನಮ್ಮ ಆತ್ಮೀಯರು ಅಥವಾ ನಮ್ಮ ಬಂಧುಗಳ      ಯೋಗ    ಕ್ಷೇಮ  ಫೋನ್ ನಲ್ಲಿಯೂ  ವಿಚಾರಿಸದಷ್ಟ್ಟು ಕೆಲಸದ ಒತ್ತಡ ತೋರಿಸಿತ್ತೇವೆ ಹಿಂದಿನ ಜನರು ಯಾವುದೇ ಒತ್ತಡ ಇದ್ದರೂ ನಮ್ಮವರು ಎನ್ನುವ ಭಾವನೆಯಿಂದ ಓಡೋಡಿ ಬರುತಿದ್ದರು ಪತ್ರದ ಮೂಲಕ ಉಭಯ ಕುಶಲೋಪರಿ ಕುರಿತು ಬರೆದು ಹಾಕುತಿದ್ದರು.
ನಾವು ಒಂದಿಷ್ಟು ನಮ್ಮ ಹಿರಿಯರ ಆದರ್ಶ ಮಾರ್ಗದತ್ತ ನಡೆಯೋಣ. ನಮ್ಮ ಬದುಕು ಬರೀ ನಮಗಾಗಿ ನಮ್ಮ ಸ್ವಾರ್ಥಕ್ಕೆ    ಶ್ರೀಮಂತಿಕೆಗೆ ಕೊಂಡು ಒಯ್ಯುವುದು ಬೇಡ.ಎಲ್ಲಿ ನಮಗಾಗಿ  ಪ್ರೀತಿಯಿಂದ ಮಾತನಾಡಿಸುವವರ ಕಡೆ ಗಮನ ಹರಿಸೋಣ. ಇದೇ ನಮ್ಮ ಮಾನವೀಯತೆ ಅಲ್ಲವೇ. ಪ್ರೀತಿ ಅಂತಃಕರಣದ ನಮ್ಮ ಭಾವನೆಗಳು ಇನ್ನೊಬ್ಬರಿಗೆ   ಹಿತ, ಸಮಾಧಾನ ಖುಷಿ ತರುವುದರಲ್ಲಿ    ಸಂಶಯವೇ ಇಲ್ಲ.
ಉತ್ತಮ ಸಂಭಂದ ಎನ್ನುವುದು ಮನುಷ್ಯನ ಮುಲಭೂತ ಅಗತ್ಯದಲ್ಲಿ ಒಂದೆನಿಸಿದೆ.
ಸಂಬಂಧದ ಪ್ರೀತಿಯ ಹೂವು ಪರಸ್ಪರ ಪ್ರೀತಿ ಗೌರವ ತೋಟದಲ್ಲಿ ಸಹಜವಾಗಿ ಅರಳುವುದೇ ಹೊರತು ಔಪಚಾರಿಕ ಅರ್ಥಾತ ಬರೀ ವ್ಯವಹಾರಿಕ ಪಂಜರ ದಲ್ಲಿ ಇಲ್ಲ.
ಒಟ್ಟಿನಲ್ಲಿ ಹೇಳುವುದಾದರೆ ಸೌಜನ್ಯ,ಸಾತ್ವಿಕತೆ ಮುಗ್ಧತೆ ಅಂತಃಕರಣ ಪ್ರೀತಿ ಮನುಷ್ಯನನ್ನು ಎತ್ತರಕ್ಕೆರಿಸುವ ಸಾಧನಗಳು.


. ಮಾಲಾ. ಕಮಲಾಪೂರಕರ್

About The Author

3 thoughts on “ಅಂತಃಕರಣ ಮತ್ತು ಪ್ರೀತಿ ಧಾರೆ ಎರೆಯುವವರಿಗೆ ಪ್ರತಿಬಿಂಬ ನಾವಾಗೋಣ-ಮಾಲಾ. ಕಮಲಾಪೂರಕರ್”

  1. ಇಂದಿನ ಯಾಂತ್ರಿಕ ಯುಗದಲ್ಲಿ ಮಾನವ ತನ್ನನ್ನೇ ತಾನು ಮರೆತು ಹೋಗುತ್ತಿದ್ದಾನೆ.ಸ್ವಲ್ಪ ಹಿಂದಿರುಗಿ ನೋಡಿ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಅಂದರೆ; ಅಂತಃಕರುಣ, ಪ್ರೀತಿ, ಸಂಬಂಧಗಳಿಗೆ ಬೆಲೆ ಕೊಟ್ಟಾಗಲೇ ಜೀವನದ ಸಾರ್ಥಕತೆ.
    ನಿಮ್ಮ ಲೇಖನ ಬಹಳ ಚೆನ್ನಾಗಿದೆ. ಅಭಿನಂದನೆಗಳು.

  2. ಬಹಳ ಸುಂದರವಾಗಿ , ಸತ್ಯವಾದ ವಿಚಾರವನ್ನು ಪ್ರತಿಬಿಂಬಿಸಿದ್ದೀರಿ..ಅಭಿನಂದನೆಗಳು

Leave a Reply

You cannot copy content of this page

Scroll to Top