ವಾಣಿ ಯಡಹಳ್ಳಿಮಠ ಗಜಲ್

ಕಾವ್ಯಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್

ನನ್ನ ರಾತ್ರಿಗಳಿಗೀಗ ನಿನ್ನನು
ಕನಸಾಗಿಸುವ ಖಯಾಲಿಯೇ ಇಲ್ಲ
ಈ ಕಂಗಳಿಗೀಗ ಮಿಥ್ಯ ನೋಟ
ಸವಿಯುವ ಖಯಾಲಿಯೇ ಇಲ್ಲ

ನಿನ್ನನೇ ಬಯಸಿ ಬಡಿದುಕೊಳ್ಳುವ
ಎದೆಯೊಂದಿತ್ತು ನನ್ನಲಿ
ನನ್ನೀ ಉಸಿರಿಗೀಗ ನಿನ್ಹೆಸರು
ಉಸುರುವ ಖಯಾಲಿಯೇ ಇಲ್ಲ

ಪ್ರತಿ ಪದ್ಯದಲ್ಲಿಯೂ ನೀ
ಇಣುಕುತಿದ್ದುದು ನಿಜವೇ ಸಾಕಿ
ನನ್ನಕ್ಷರಗಳಿಗೀಗ ಕರಗಿದ ಕಂಬನಿ
ಕೊರೆಯುವ ಖಯಾಲಿಯೇ ಇಲ್ಲ

ಹೃದಯದ ಮೂಲೆ ಮೂಲೆಯೂ
ರೋಧಿಸಿ ನೆತ್ತರು ಹರಿಸುತಿದೆ
ಮತ್ತೊಮ್ಮೆ ಮನಸ್ಸಿಗೀಗ ಒಡೆದು
ಚೂರಾಗುವ ಖಯಾಲಿಯೇ ಇಲ್ಲ

ನೆನಪಿನಲಿ ಹಾಗೆಯೇ ನಿನ್ನನು
ನೇವರಿಸುತಿದ್ದಳು ‘ವಾಣಿ ‘,,
ಸತ್ತ ಕ್ಷಣಗಳನ್ನೀಗ ಮರಳಿ
ಸಿಂಗರಿಸುವ ಖಯಾಲಿಯೇ ಇಲ್ಲ …

———————–

ವಾಣಿ ಯಡಹಳ್ಳಿಮಠ

One thought on “ವಾಣಿ ಯಡಹಳ್ಳಿಮಠ ಗಜಲ್

Leave a Reply

Back To Top