ಗಂಗಾಧರ ಅವಟೇರ-ಹಾಯ್ಕುಗಳು

ಕಾವ್ಯ ಸಂಗಾತಿ

ಗಂಗಾಧರ ಅವಟೇರ

ಹಾಯ್ಕುಗಳು


ಮನದ  ಗಾಯ
ಮಾಯಿಸುವ  ಮುಲಾಮು
ಕವಿತೆಗಳು

ಮರೆಯದಿರು
ಮಗ್ಗುಲಾಸರೆಯಾದ
ಮಾನಿನಿಯನು.

ಅವಳ ಕೋಪ
ಮಟಮಟ ಮಧ್ಯಾಹ್ನ
ಕೈ ಕಾಸಿದ್ಹಾಂಗ.!

ಮುಸ್ಲಿಂ-ಯಹೂದಿ
ಪ್ರೊಟೆಸ್ಟಂಟ್  ಹೋರಾಟ;
ನೆಲ ಓಕುಳಿ.

ಎಷ್ಟು ದಿವಸ
ಮರಸುತ್ತುವ ಆಟ
ಹೊಸಜೀವಕೆ

ಯೇಸುವು ಮತ್ತೆ
ಹುಟ್ಟಲಿ ಸೈತಾನರ;
ಮಾಪ ಮಾಡಲು.

ನಡೆಯುತ್ತಿದೆ
ಶಸ್ತ್ರಾಸ್ತ್ರಗಳ ಮಳೆ;
ನೆಲವೇ ಬಂಜೆ.

ಬಾಂಬಿನ ಮಳೆ
ಸುರಿದು ಕಮರ್ಯಾವ

ಜೀವ ಸಂಕುಲ.


ಗಂಗಾಧರ ಅವಟೇರ

Leave a Reply

Back To Top