ಪೂರ್ಣಿಮಾ ರಾಜೇಶ್ ಕವನ ಸಂಕಲನ ‘ಪೂರ್ಣಕಾವ್ಯ’ ಅವಲೋಕನ ಸವಿತಾ ಮುದ್ಗಲ್

ಕಾವ್ಯ ಸಂಗಾತಿ

ಪೂರ್ಣಿಮಾ ರಾಜೇಶ್ ಕವನ ಸಂಕಲನ

‘ಪೂರ್ಣಕಾವ್ಯ’

ಅವಲೋಕನ ಸವಿತಾ ಮುದ್ಗಲ್

“ಪದ್ಯo ವದ್ಯo ಗದ್ಯo, ಹೃದ್ಯo” ಎಂದು ಪ್ರಾಸಂಗಿಕವಾಗಿ ಕವಿ ಮುದ್ದಣ ಹೇಳಿದ್ದರೂ ಬಹುತೇಕ ಕವಿಗಳ ಸಾಹಿತ್ಯ ಪಯಣ ಆರಂಭವಾಗುವುದೇ ಕವಿತೆಗಳಿಂದ. ಕವನಗಳ ಆಕರ್ಷಣೆಯೇ ಅಂತಹುದು. ವಿದ್ಯಾರ್ಥಿ,ಉದ್ಯೋಗ ವಯಸ್ಸು ಜಾತಿ, ಮತಗಳ ಅಂತರವನ್ನು ದಾಟಿ ಕವಿತೆಗಳು ಎಲ್ಲರನ್ನು ಸೆಳೆಯುತ್ತವೆ  ಎಂದು ಪೂರ್ಣಕಾವ್ಯ ಕೃತಿಗೆ ಮುನ್ನುಡಿಯನ್ನು ಶ್ರೀ ಪದ್ಮನಾಭ ಸರ್ ಬರೆದಿದ್ದಾರೆ.

ಕವಯತ್ರಿಯವರು ತಮ್ಮ ವಿದ್ಯಾಭ್ಯಾಸ *ಎಸ್.ಎಸ್.ಎಲ್.ಸಿ ವರೆಗೆ ನಂತರ  ಗೃಹಿಣಿಯಾಗಿದ್ದುಕ್ಕೊಂಡು ,ಸಮಾಜ ಸೇವಕಿಯಾಗಿ ಜೊತೆಗೆಪ್ರವೃತ್ತಿಯನ್ನು ಕವನ ರಚನೆ ಹಾಗು ಹವ್ಯಾಸಿ ಬರಹಗಾರ್ತಿಯಾಗಿಕನ್ನಡ ಸೇವೆ ಮಾಡುತ ಮುಖಪುಟ ಹಾಗೂ ವಾಟ್ಸಪ್ ನ ಹಲವಾರು ಸಾಹಿತ್ಯ ಬಳಗದಲ್ಲಿ ಕಥೆ ,ಕವನ ,ಲೇಖನ ,ಹನಿಗವನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ಸರಿ ಸುಮಾರು ಕಳೆದ 4ವರುಷದಿಂದ 2000 ಕ್ಕೂ ಹೆಚ್ಚು ಅಭಿನಂದನಾ ಪತ್ರಗಳನ್ನುಪಡೆದಿರುವರು.

ಹಲವಾರು ಉತ್ತಮ ಪುಸ್ತಕಗಳನ್ನು ಬಹುಮಾನವಾಗಿ  ಪಡೆದಿರುವುದರ ಜೊತೆಗೆ ಇವರವಿಶೇಷ ಹವ್ಯಾಸವೆಂದರೆ ಹಲವಾರು ಅಡುಗೆ ಸ್ಪರ್ಧೆಗಳಲ್ಲಿವೈವಿಧ್ಯಮಯ ರುಚಿಕರ ಅಡುಗೆ ಮಾಡುವುದು, 1000ಕ್ಕೂ ಹೆಚ್ಚಿನ ರೆಸಿಪಿಗಳು  ವೈವಿಧ್ಯಮಯ ತಿನಿಸುಗಳ ಮಾಡಿರುವ ಇವರುಕಥಾಗುಚ್ಛ ಕನ್ನಡ ಸಾಹಿತ್ಯ ಬಳಗದಲ್ಲಿ ಕಾವ್ಯ ಧಾರೆ ಕವನ ಸಂಕಲನ ಪುಸ್ತಕದಲ್ಲಿ ರಚಿಸಿದ ಎರಡು ಕವನಗಳು,ಕೃಷ್ಣ ಪ್ರಿಯ ಕಲಾಬಳಗದ ಸಾಹಿತ್ಯ ಲಾಲಿತ್ಯ ಕವನ ಸಂಕಲನ ಪುಸ್ತಕದಲ್ಲಿ  ಎರಡು ಕವನ ಪ್ರಕಟಣೆಯಾಗಿವೆ.

ಪೂರ್ಣಕಾವ್ಯ ಕವನ ಸಂಕಲನ ಕೃತಿ ದಿನಾಂಕ 21/5/2023ರಂದು ನಮ್ಮ ಬೆಂಗಳೂರಿನ ವಿಜಯನಗರದಲ್ಲಿ ಚೊಚ್ಚಲ ಕವನ ಸಂಕಲನ ಪೂರ್ಣ ಕಾವ್ಯ ಕೃತಿಯ ಲೋಕಾರ್ಪಣೆಯಾಗಿದೆ.
ಪ್ರಶಸ್ತಿಗಳು-:ಕನ್ನಡ ಸಾಹಿತ್ಯ ಸಂಘ ಸಂಸ್ಥೆಗಳಿಂದ ಹಲವಾರು  ಪ್ರಶಸ್ತಿಗಳು ನೆನಪಿನ ಕಾಣಿಕೆ ಅಭಿನಂದನಾ ಪತ್ರ ಪಡೆದಿರುವರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಮಹಿಳಾ ಚೈತನ್ಯರತ್ನ ಪ್ರಶಸ್ತಿ ,ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ನೆನಪಿನ ಕಾಣಿಕೆ ಅ.ಪತ್ರ .ಸ್ನೇಹಿ ಕುಟುಂಬದಿಂದ ಉತ್ತಮ ಅಡ್ಮಿನ್ ಪ್ರಶಸ್ತಿ ಪಡೆದಿರುವೆ ಅಡುಗೆ ಅರಮನೆ ಬಳಗದಿಂದ ಪಾಕ ಪ್ರವೀಣೆ ಬಿರುದು  ಪ್ರಶಸ್ತಿ ಹಾಗೂ  ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ.

ಕೃತಿಯನ್ನು ಇವರು ತಮ್ಮ ತಂದೆ ತಾಯಿಯವರಿಗೆ ಅರ್ಪಣೆ ಮಾಡಿದ್ದಾರೆ.
 ಕೃತಿಗೆ ಬೆನ್ನುಡಿಯನ್ನು ಕಾವ್ಯ ಕಲ್ಪವಲ್ಲಿ ಯಲ್ದೂರುರವರು ಬರೆದಿದ್ದಾರೆ.
 ಪೂರ್ಣಕಾವ್ಯ ಕೃತಿಯಲ್ಲಿ ಒಟ್ಟು 78 ಕವನಗಳಿವೆ.

ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ತಮ್ಮ ಚಾಪನ್ನು ಮೂಡಿಸುತ್ತಿರುವ ಕವಿಯತ್ರಿ ಶಿಶು ಗೀತೆ, ಭಕ್ತಿ ಗೀತೆ ಪ್ರಕೃತಿ ಗೀತೆ ಜಾನಪದ ಗೀತೆ ಹಾಗೂ ಪ್ರೇಮಿ ಗೀತೆ ಎಲ್ಲಾ ರೀತಿಯ ಕವನಗಳನ್ನು ಕೂಡ ಬರೆದಿರುತ್ತಾರೆ. ಸರಳ ಮತ್ತು ಪ್ರಾಸಪದವಾದ ಕವನಗಳು ಇವರ ಬರಹದ ವೈಶಿಷ್ಟವಾಗಿದೆ.
 ತಮ್ಮ ಸಂಸಾರದ ಜವಾಬ್ದಾರಿಯೊಂದಿಗೆ ಸಾಹಿತ್ಯದ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ನಾವು ಮಾಡುವ ಕೆಲಸದಲ್ಲಿ ವಿಘ್ನಗಳು ಬರದೇ ಇರಲೆಂದು ಗಣಪತಿಗೆ ಮೊದಲು ಪೂಜೆ ಮಾಡುವೆವು. ಈ ಈ ಗಣಪನಿಗಾಗಿ ಕವಯತ್ರಿ ಅವರು ಸಿದ್ಧಿ ವಿನಾಯಕ ಎಂಬ ಮೊದಲ ಕವನವನ್ನು ರಚಿಸಿದ್ದಾರೆ.
” ಅಭಯವ ನೀಡುವ ಸಿದ್ಧಿ ವಿನಾಯಕನೇ ಬಾರೋ
 ಅಭಯ ಬುದ್ಧಿಪ್ರದಾಯಕ ಗಜಾನನೇ ಬಾರೋ
 ವಿಜಯಯ ಜಯಿಸಿದ ಗೌರಿಯ ವರಪುತ್ರನೇ ಬಾರೋ
 ನಂದಿವಾಹನನ ಪ್ರಿಯ ಸುಪುತ್ರ ಬೆನಕನೇ ಬಾರೋ”ಎಂದು ಸೊಗಸಾಗಿ ರಚಿಸಿದ್ದರೆ, ವರ್ಷಧಾರೆ ಕವನದಲ್ಲಿ ” ಮುಂಗಾರಿನ ಮಳೆ ಮೋಡಿ ಮಾಡಿತು ತಂಪು ತಂಗಾಳಿಯು ತಂಪನ್ನು ತಂದಿತು ಆಕರ್ಷಕ ಅಪರೂಪದ ಅಂದದ ಆಗಸ ಪೃಥ್ವಿಯ ಪರಿಸರ ಪ್ರಕೃತಿಯ ಪಥವಿದು”ಎಂದು ಮುಂಗಾರಿನ ಮಳೆಯ ಬಗ್ಗೆ ಸೊಗಸಾಗಿ ರಚಿಸಿದ್ದಾರೆ.

ನೆನಪಿನ ಜೋಳಿಗೆ ಕವನದಲ್ಲಿ ” ನೆನಪಿನ ಜೋಳಿಗೆಯಲ್ಲಿ ಸಾವಿರ ಕನಸುಗಳು ಮಾಸದಂತ ಸವಿನೆನಪುಗಳ ಕತ್ತಿಟ್ಟ ಬುತ್ತಿಗಳು ಹೃದಯದಾಳದಲ್ಲಿ ಮರೆಯಲಾಗದ ನೆನಪುಗಳು ನನ್ನ ಅಂತರಂಗದಲ್ಲಿ ಪುಟ್ಟಿದೇಳುವ ಯುವ ಬಯಕೆಗಳು ಎಂದಿದೆ. ಈ ಬದುಕೆಂಬ ಜೋಳಿಗೆಯಲ್ಲಿ ಕನಸುಗಳು ತುಂಬಿಕೊಂಡಿರುವ ಮನುಷ್ಯನಿಗೆ ನಮಗೆ ತಿಳಿದು ತಿಳಿಯದಂತೆ ನೆನಪಾಗಿ ಹರೆದು ಪುಟಿದೇಳುವಂತೆ ಮಾಡುತ್ತದೆ. ಇದನ್ನು ಕವಿಯತ್ರಿ ತುಂಬಾ ಆಕರ್ಷಣೆಯುಕ್ತವಾಗಿ ಪದಗಳ ಜೋಡಣೆ ಮಾಡಿದ್ದಾರೆ.

ಹೀಗೆ ಒಂದೊಂದು ಕವನಗಳು ಒಂದಕ್ಕಿಂತ ಒಂದು ಅಚ್ಚುಕಟ್ಟಾಗಿ ರಚನೆಯಾಗಿದ್ದು ಈ ಕೃತಿ ಓದುಗರ ಮನಸ್ಸಿಗೆ ಮುದ ನೀಡುತ್ತದೆ ಎಂದು, ಮುಂದಿನ ಸಾಹಿತ್ಯದ ಪಯಣದಲ್ಲಿ ಕವಯತ್ರಿಗೆ ಇನ್ನಷ್ಟು ಯಶಸ್ಸು ದೊರೆಯಲಿ ಎಂದು ಹಾರೈಸುವೆ.


ಸವಿತಾ ಮುದ್ಗಲ್

2 thoughts on “ಪೂರ್ಣಿಮಾ ರಾಜೇಶ್ ಕವನ ಸಂಕಲನ ‘ಪೂರ್ಣಕಾವ್ಯ’ ಅವಲೋಕನ ಸವಿತಾ ಮುದ್ಗಲ್

  1. ಧನ್ಯವಾದಗಳು ಸಂಗಾತಿ ಪತ್ರಿಕೆ ನಿರ್ವಾಹಕರ ಬಳಗದವರಿಗೆ ಹಾಗು ಸಂಪಾದಕರಾದ ಮಧು ಸೂದನ್ ಸರ್ ಗು

  2. ನನ್ನ ಚೊಚ್ಚಲ ಕವನ ಸಂಕಲನ ಪೂರ್ಣ ಕಾವ್ಯ ಕೃತಿಯ ಚಂದದ ಪರಿಚಯ ಬರಹ ಹೃತ್ಪೂರ್ವಕ ಧನ್ಯವಾದಗಳು ಕವಯತ್ರಿ

Leave a Reply

Back To Top