ಹೊಸ ವರ್ಷದ ವಿಶೇಷ-2023

ಮಮತ (ಕಾವ್ಯ ಬುದ್ಧ)

ವಧು ಪರೀಕ್ಷೆ

ಹನಿ ಹನಿಯಾಗಿ
ಇಳೆಗೆ ಮುತ್ತಿಕ್ಕುವ
ಮೋಡದ ಆಸೆ
ಈಡೇರುವಾಗಲೆಲ್ಲಾ
ನನ್ನಾಸೆಗಳು ಚಿಗುರೊಡೆಯುತ್ತವೆ

ಪ್ರಥಮ ರಾತ್ರಿಗೆ
ಸಿದ್ದಾಳಾಗುವ
ನವವಧುವಿನಂತೆ
ಸಿಂಗರಿಸಿಕೊಳ್ಳುತ್ತವೆ

ಹೊಸ್ತಿಲ ಬಳಿ ಬಂದು
ತುದಿಗಾಲಲ್ಲೇ ನಿಲ್ಲುತ್ತವೆ
ಕಾತರಿಸುತ್ತವೆ
ಹೆಪ್ಪುಗಟ್ಟಿದ ಕನಸುಗಳು
ಚಿಗುರೊಡೆದ ಘಳಿಗೆಗಾಗಿ

ಸೋಲೊಪುದೆ
ಶೃಂಗಾರ ಬಾಡದಂತೆ
ಮತ್ತೆ ಮತ್ತೆ
ವಧು ಪರೀಕ್ಷೆಗೆ ಸಿದ್ದಳಾಗುವಂತೆ


Leave a Reply

Back To Top