ಅನ್ನಪೂರ್ಣ ಸಕ್ರೋಜಿ-ಅಬಾಬಿಗಳು

ಕಾವ್ಯ ಸಂಗಾತಿ

ಅಬಾಬಿಗಳು

ಅನ್ನಪೂರ್ಣ ಸಕ್ರೋಜಿ

ಇಹಲೋಕದ ಅನುಭವ
ಪರಲೋಕದ ಅನುಮಾನ
ಬಿಟ್ಟು ಬಿಡು ಅಭಿಮಾನ
ಅನುತಾಯಿ
ಬೇಡವೆ ನಿನಗೆಅನುಷ್ಠಾನ?

ಬಿಡು ಲೌಕಿಕ ಸಂಗತಿ
ನೋಡು ಅಲೌಕಿಕದ ಕಡೆ
ಹಾರಾಡುವ ಮನವ
ಅನುತಾಯಿ
ತಡೆಹಿಡಿಯಲಾರೆಯಾ?

ಕಾವ್ಯ ಸಂಗಾತಿ

ಅಬಾಬಿಗಳು

ಅನ್ನಪೂರ್ಣ ಸಕ್ರೋಜಿ

ಚಂಚಲ ಚಿತ್ತದಲಿ
ಚಿತ್ಸ್ವರೂಪ ಕಾಣದು
ಚಿದ್ಘನಾನಂದನ
ಅನುತಾಯಿ
ಸ್ಮರಿಸಲಾರೆಯಾ ?

ನಿತ್ಯ ಸತ್ಸಂಗದಲಿ
ಶ್ರವಣ ಮನನ ಚಿಂತನ
ನಿರಂತರವಾಗಿರಲೆಂದು
ಅನುತಾಯಿ
ಕೇಳಲಾರೆಯಾ ?

ವ್ಯಾಮೋಹ ಸಿಟ್ಟು ಸೆಡವು
ಮಮಕಾರ ಅಹಂಕಾರ
ನಾಶ ಮಾಡುವವೆಂದು
ಅನುತಾಯಿ
ಅರಿಯಲಾರೆಯಾ?

ಆಧಿ ವ್ಯಾಧಿ ಉಪಾಧಿಗೆ
ಅಂಟಿಕೊಳ್ಳದೇ
ಉಪಾಧಿರಹಿತನಲಿ
ಅನುತಾಯಿ
ನೆಲೆನಿಲ್ಲಲಾರೆಯಾ?


Leave a Reply

Back To Top