ಇಮಾಮ್ ಮದ್ಗಾರ ಕವಿತೆ-ನೀನೇ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ ಕವಿತೆ-

ನೀನೇ

ನೀನೇ ಒಡೆದ ಮನಸಿನ ಕನ್ನಡಿಯ ಚೂರುಗಳ ತುಂಬಾ…
ನೀನೇ ಕತ್ತರಿಸಿದೆನ್ನ ಕನಸುಗಳುಸಿರ ತಿತ್ತಿಯ ತುಂಬಾ….

ನೀನೆ ಮಿಡಿದು ನೀನೆ ಮುರಿದ ವೀ…ಣೇಯ ತಂತಿಗಳ ಲಯದ ತುಂಬಾ….
ನೀನೆ ಕೆದಕೆದಕಿ ಹುಡುಕಿದಾ ಸತ್ತು ಹೋದೆನ್ನ ಕನಸುಗಳ ಕನವರಿಕೆ ತುಂಬಾ…

ನಿನ್ನ ಗೆಲುವಿಗಾಗಿ ನನ್ನೊಲವ ಮುರಿದು ಬರಡಾಗಿಸಿದೆನ್ನ ಬದುಕಿನ ಕಳವಳಿಕೆಗಳ ತುಂಬಾ…

ನೀನೇ ಕತ್ತಲೆಯ ತೋರಿಸಿದಾ.. ಹುಣ್ಣಿಮೆಯದಿನ ನಾಚಿದ ಚಂದಿರನ ನಾಚಿಕೆಯ ತುಂಬಾ…

ಕಮರಿ ಕರಗುತ್ತಿದ್ದೆನ್ನ ಮನದ ನೋವಿನ ಗಾಯಗಳ ಮೇಲೆ ನಾನು ಲೇಪಿಸುತಿದ್ದ ನಂಬಿಕೆಯ ಮುಲಾಮಿನ ತುಂಬಾ….

ಕೇ….ವಲ ಪ್ರೀತಿಯ ಮುಖವಾಡ ತೊಟ್ಟು ನನ್ನೆಲ್ಲಾ ಸೆಗಳಿಗೆ ನಂಬಿಕೆಯ ಬೆಂಕಿಯಿಟ್ಟು ನೀನೀ.. ಮಾಗಿ ಚಳಿಯಲ್ಲಿ ಮೈ ಕಾಯಿಸುವ ಚಿತ್ರ ಕಾಣುತಿತ್ತು


One thought on “ಇಮಾಮ್ ಮದ್ಗಾರ ಕವಿತೆ-ನೀನೇ

  1. ಸೂಪರ್ ಸರ್
    ಸಂಗಾತಿ ಬಳಗದ ಓದುಗಳು ಡಾ. ಪುಷ್ಪಾ ಶಲವಡಿಮಠ

Leave a Reply

Back To Top