ಹುಳಿಯಾರ್ ಷಬ್ಬೀರ್-ಅಬಾಬಿ ಕಾವ್ಯ

ಕಾವ್ಯ ಸಂಗಾತಿ

ಹುಳಿಯಾರ್ ಷಬ್ಬೀರ್-ಅಬಾಬಿ ಕಾವ್ಯ

1) ದೊಡ್ಡವರ ಹುನ್ನಾರ
ಚಿಕ್ಕವರ ಚೀತ್ಕಾರ
ಪ್ರಜ್ಞಾವಂತಿಕೆ ಅಡವಿಡಬೇಡಿ
ಷಬ್ಬೀರ್…!
ಜಗತ್ತು ನೋಡಿ ಜಾಗೃತರಾಗಿ.

2 ) ಅವಳು ಅವಳಲ್ಲ
ಕವಲು ನೋಟದವಳು
ಹೃದಯದಲ್ಲಿ ಮಸಿ
ಷಬ್ಬೀರ್…!
ಕಸಿಯಾಗಬೇಕಿದೆ ಭಾವನೆ.

3 ) ಕುಡುಕರ ಸಂತೆಯಲ್ಲಿ
ಹೊಸ ಬ್ರಾಂಡ್ ಗಳದ್ದೇ ಚಿಂತೆ
ಅರೆ ಪ್ರಜ್ಞಾವಂತಿಕೆಯ ಚರ್ಚೆ
ಷಬ್ಬೀರ್…!
ನಶೆ ಇರುವವರೆಗೆ ಮಾತ್ರ.

4 ) ತೆವಲುಗಳ ತಾಕಲಾಟದಲ್ಲಿ
ಹೊಟ್ಟೆಯ ಮೇಲೆ ಹೊಡೆಯಬೇಡಿ
ನರರೇ..? ಭಗವಂತನು
ಷಬ್ಬೀರ್…!
ನಿಮ್ಮ ಅಸ್ತಿತ್ವಕ್ಕೆ ಮೊಳೆ ಹೊಡೆದಾನು

5 ) ಸ್ವಾರ್ಥ ಮೌಲ್ಯ ಕೊಂದಾಗ
ಅವಮಾನ ಹೆಗಲೇರಿದಾಗ
ಅವಮಾನದ ಬುತ್ತಿ ಪರಾಕಾಷ್ಟತೆಯಾಗಿ
ಷಬ್ಬೀರ್…!
ಸುಂದರ ಬದುಕು ಮೂರಾಬಟ್ಟೆ.


Leave a Reply

Back To Top