ಹುಳಿಯಾರ್ ಷಬ್ಬೀರ್-ತನಗ

ಕಾವ್ಯ ಸಂಗಾತಿ

ತನಗ

ಹುಳಿಯಾರ್ ಷಬ್ಬೀರ್

“.”

1) ನನ್ನೊಡನೆ ಇದ್ದಷ್ಟು
ಒಲವೇ ನಾಚಿದಂತೆ
ನೀ ಹೋದ ಮೇಲಷ್ಟೇ
ಮೌನವೇ ರಾಚಿದಂತೆ.

2) ನನ್ನವಳ ಚೆಲುವು
ಜೀವನವೇ ಒಲವು
ಪ್ರತಿಕ್ಷಣವೂ ಖುಷಿ
ನಾನು ಖುಷಿಯ ಋಷಿ.

3) ಯಾರಿಲ್ಲ ನಿನ್ನ ಬಿಟ್ಟು
ಈ ಜಗತ್ತು ನೀನಷ್ಟೇ
ಮನಸ್ಸಾಗಿ ಕಾಪಿಟ್ಟು
ಸದಾ ತೋರುವ ನಿಷ್ಠೆ.

4) ಒಲವೇ ಸಾಕ್ಷಿಯಾಗು
ಬೆರೆತು ಧನ್ಯ ನಾನು
ಮನಸ್ಸೇ ಜೊತೆಯಾಗು
ಭಾವದ ಬಂಧಿ ನೀನು.

5) ಒಲವ ಹಾದಿಯಲಿ
ಜೀವನದ ಸೊಬಗು
ಸಂಭ್ರಮ ದಾರಿಯಲಿ
ಕನಸುಗಳ ರಂಗು.


One thought on “ಹುಳಿಯಾರ್ ಷಬ್ಬೀರ್-ತನಗ

Leave a Reply

Back To Top