ಕಾವ್ಯ ಸಂಗಾತಿ
ನನ್ನೊಳಗೋ?
ಒಲವು
ಕವಿತೆಯೊಳಗೆ ನಾನೋ?
ನನ್ನೊಳಗೆ ಕವಿತೆಯೋ?
ನಾನು ಕವಿತೆಯ ಮೊಗ ನೋಡಲು,
ಕವಿತೆ ನನ್ನನ್ನೇ ದಿಟ್ಟಿಸುತ್ತದೆ
ಒಬ್ಬರನ್ನೊಬ್ಬರು
ನೋಡನೋಡುತ್ತಲೇ
ಕಳೆದುಹೋಗುತ್ತೇವೆ
ಹುದುಗಿಕೊಂಡ ಅಕ್ಷರಗಳೆಲ್ಲಾ ಪಕ್ಕ ಪಕ್ಕವೇ ಕೂತು
ಪ್ರಣಯದ ಪದ್ಯ ಬರೆಯುತ್ತವೆ.
ಕಾಲ ಕಾಲಕ್ಕೆ ಹೊರಹೊಮ್ಮುವ ಅಕ್ಷರಗಳು,ಪದ,ಸಾಲುಗಳು
ಕವಿತೆಯಾಗುತ್ತವೆಯೆಂದರೆ,
ಕವಿತೆಯೊಳಗೆ ನಾನೋ?
ನನ್ನೊಳಗೆ ಕವಿತೆಯೋ?
ಇರಲೇಬೇಕಲ್ಲವೇ?
ಒಲವು