ಕಾವ್ಯ ಸಂಗಾತಿ
ಹೀಗೊಂದು ಕವಿತೆ
ಮಾಜಾನ್ ಮಸ್ಕಿ
1.
ನಿನಗಾದ ಅವಮಾನಗಳಿಗೆ ಕಣ್ಣೀರು ಸುರಿಸುತ್ತಿದ್ದೀಯಾ
ಜಾನ್!!
ಒಂದೊಂದು ಹನಿಯು ನಿನ್ನಾತ್ಮ ಎಚ್ಛೆತ್ತುಕೊಳ್ಳುವಂತೆ ಮಾಡಿದ ಸನ್ಮಾನ.
2.
ಮಾತುಗಾರಿಕೆಯ ಕಲೆ ಇದೆ ಎಂದು ಮಾತಾನಾಡುವರು
ಜಾನ್!!
ತಮ್ಮ ಸುಳ್ಳು ನಿಜ ಎಂದು ನಂಬುವ ಜನಗಳ ಮುಂದೆ.
3.
ಎಲ್ಲೆಲ್ಲೂ ಹಣದ ದರ್ಬಾರೆ ನೋಡು
ಜಾನ್!!
ಆದರೂ ಪ್ರೀತಿಯ ಮುಖವಾಡವನ್ನೇ ನಂಬುತ್ತೇವೆ.
4.
ಜೀವನ ನಡೆಯುತ್ತಲೇ ಇರುತ್ತೆ ಇದೊಂದು ಬಿಡಿಸದ ಕಗ್ಗಂಟು
ಜಾನ್!!
ಇದು ಮೋಸದ ವ್ಯಕ್ತಿತ್ವಕ್ಕೆ ಅರ್ಥವು ಸಿಗದ ನಿಘಂಟು.