ಸಚ್ಚಿ ದಾನಂದ್. ಕೆ. ಎಸ್-ನಿನ್ನ ಮಂದಹಾಸ

ಕಾವ್ಯ ಸಂಗಾತಿ

ನಿನ್ನ ಮಂದಹಾಸ

ಸಚ್ಚಿ ದಾನಂದ್. ಕೆ. ಎಸ್

ನಿನ್ನ ಮೋಹಕ ಮಂದಹಾಸ
ತುಂಬಿ ಕಂಗಳಲಿ ಸೆಳೆತ
ಹಾಲ್ಗೆನ್ನಗಳ ಹಿಗ್ಗಿಸುತ
ಹೊಳಪ ಮೆರುಗ ಹೆಚ್ಚಿಸುತ

ಹೂವಂತೆ ಬಿರಿದ ತುಟಿಗಳು
ತೋರಿ ಸುಂದರ ದಂತಗಳು
ಹಲ್ಲುಗಳೋ ಮತ್ತಿನಸಾಲು
ಚಿಮ್ಮತ ಬೆಳದಿಂಗಳ ಹಾಲು

ಮುಂದಲೆಯಲಿ ಓಲಾಡುವ
ಅಂದದ ಮುಂಗುರುಳಬಳ್ಳಿ
ಮಂದ ಮಾರುತ ಅದನು ತಳ್ಳಿ
ಕಾಪಾಡಲೆಂತು ನನ್ನ ಸಂಯಮವ

ಜಗದ ಅಂದವು ಅರಸಿ ಅರಸಿ. ತನಗಿಂತ ಚೆಂದವ ನೋಡ ಬಯಸಿ
ನಿನ್ನ ಮುಖವ ನೋಡಿ ಆನಂದದಲಿ ಸೆರೆಯಾಗಿಮುಂಗುರುಳjಸುಳಿಯಲಿ


Leave a Reply

Back To Top