ಮಾನ ಪ್ರಾಣ-ಡಾ ಶಶಿಕಾಂತ ಪಟ್ಟಣ

ಕಾವ್ಯ ಸಂಗಾತಿ

ಮಾನ ಪ್ರಾಣ

ಡಾ ಶಶಿಕಾಂತ ಪಟ್ಟಣ

ಬೇಡ ನನಗೆ ಪ್ರಶಸ್ತಿ ಹಾರ
ಬೇಡ ಶಾಲು ಪುರಸ್ಕಾರ
ಮುಗುಳು ನಗೆಯ
ಸ್ನೇಹ ಸಿರಿಯ ನೀನು
ನನ್ನ ಬಹುಮಾನ

ನಿತ್ಯ ಜೀವದ ಸ್ಫೂರ್ತಿ
ಬಾಳ ಬಟ್ಟೆಯ ಪ್ರೀತಿ
ಮೌಲ್ಯಗಳ ಮಹಾಮೂರ್ತಿ
ದಶ ದಿಕ್ಕಿಗೆ ನಿನ್ನ ಕೀರ್ತಿ
ನೀನು ನನ್ನ ಅಭಿಮಾನ

ಕಳೆದು ಕತ್ತಲೆ ಬೆಳಕ ಚೆಲ್ಲಿ
ಮನದ ಅಂಗಳ ಸ್ವಚಗೊಳಿಸಿ
ಕವನ ಕಾವ್ಯ ಕಿಟಕಿ ಬಾಗಿಲು
ದೂರ ಪಯಣಕೆ ಸಜ್ಜುಗೊಳಿಸಿ
ಇಲ್ಲವಾಯಿತು ಬಿಗುಮಾನ

ನೀನು ನನ್ನ ಜೀವಧಾತೆ
ಬರೆದ ಮುನ್ನುಡಿ ಬಾಳಕಥೆ
ಹಂಚಿಕೊಂಡು ನೋವು ನಲಿವು
ರೆಕ್ಕೆ ಬಿಚ್ಚಿ ಹಾರುವ
‍ ಶಾಂತಿ ಸಮತೆ ಮಾನ ಪ್ರಾಣ



One thought on “ಮಾನ ಪ್ರಾಣ-ಡಾ ಶಶಿಕಾಂತ ಪಟ್ಟಣ

Leave a Reply

Back To Top