ಪ್ರೋ ವಿಜಯಲಕ್ಷ್ಮಿ ಪುಟ್ಟಿ -ಬದುಕುತ್ತಿದ್ದೇನೆ ನಾನು..

ಕಾವ್ಯ ಸಂಗಾತಿ

ಬದುಕುತ್ತಿದ್ದೇನೆ ನಾನು..

ಪ್ರೋ ವಿಜಯಲಕ್ಷ್ಮಿ ಪುಟ್ಟಿ

ಬದುಕುತ್ತಿದ್ದೇನೆ ನಾನು
ನಿನ್ನ ನೆನಪುಗಳ ಭಾರಹೊತ್ತು
ಬೆನ್ನಿಗೇರಿದ ನೆನಪುಗಳ ದಿನವೂ ತುಸು ತುಸುವೇ ಇಳಿಸಿಕೊಳ್ಳುತ್ತ ಬೇಕಾದವುಗಳ ಉಳಿಸಿಕೊಳ್ಳುತ್ತ….

ಬದುಕುತ್ತೇನೆ ನಾನು ಬರೀ ಸ್ನೇಹ ಪ್ರೀತಿ ವಿಶ್ವಾಸ ನಂಬಿ
ದ್ರೋಹ ಎಸಗಿದವರನ್ನು ಕೂಡ ಪ್ರೀತಿಸುತ್ತ ಕ್ಷಮಿಸುತ್ತ ಆಗಾಗ ನೆನಪಿಸಿಕೊಳ್ಳುತ್ತ….

ಬದುಕುತ್ತೇನೆ ನಾನು ಕತ್ತರಿಸಲ್ಪಟ್ಟ ಸಂಬಂಧಗಳ ಮತ್ತೆ ಜೋಡಿಸುತ್ತ
ತೇಪೆ ಹಾಕುತ್ತಾ
ಕುಳಿತಿದ್ದೇನೆ ಸೂಜಿದಾರ ಹಿಡಿದುಕೊಂಡೆ…

ಬದುಕುತ್ತೇನೆ ನಾನು ಆಕಾಶದಲ್ಲಿರುವ ಸೂರ್ಯ-ಚಂದ್ರರಷ್ಟೇ
ಸತ್ಯ ಸಾಕ್ಷ ನಿಷ್ಠವಾಗಿ
ಎಲ್ಲವನ್ನು ನುಂಗಿಕೊಂಡು
ಎಲ್ಲ ಸಂಬಂಧಗಳನ್ನು ಸಮೀಕರಿಸಿಕೊಂಡು….


Leave a Reply

Back To Top