ಕಾವ್ಯ ಸಂಗಾತಿ
ಉಷೆ
ಸಚ್ಚಿ ದಾನಂದ್. ಕೆ. ಎಸ್.
ನಿಶೆಯ ನೆನೆದು ಉಷೆ
ನಾಚಿ. ನಾಚಿ ಕೆಂಪಾಗಿ
ಪ್ರಿಯಕರನ ದಿನಕರನ
ಪ್ರೀತಿಯ ನೆನಪಾಗಿ.
ಏನೋ ಆತುರ ಕಾತುರ
ಹೊಸ ಅನುಭವ ಈ ತರ
ಅವನ ಆಗಮನದ ನಿರೀಕ್ಷೆ
ತನ್ನ ಸಂಯಮದ ಪರೀಕ್ಷೆ
ಮೆಲ್ಲಗೆ ರವಿಯು ಬಂದನು
ಜಗದ ಸೌಂದರ್ಯವ
ಜೊತೆಗೆ ತಂದನು
ನೀಡೆ ಉಷೆಗೆ ಸನ್ಮಾನವ
ಉಷೆ ಹಚ್ಚಿ ನಶೆದಿಶೆ ದಿಶೆಗೆ
ಸುಪ್ರಭಾತದ ಮಂಗಳಕೆ
ರಂಗುರಂಗಿನಾರತಿ ಬೆಳಗಿ
ಚೈತನ್ಯದುಗಮವ ಮೊಳಗಿ
ಉಷೆಯು ರವಿಯ ಪ್ರೀತಿಯಲಿ
ಮಿಂದು, ತಬ್ಬಿ, ಅವನ ಒಲವಲಿ
ಲೀನಲಾದಳು ಅಪ್ಪುಗೆ ಯಲಿ
ಬೆಳಕಿಗೆ ಹೊಳಪಾಗುತಲಿ