ಸವಿತಾ ಮುದ್ಗಲ್ ಕವಿತೆ-ಹಳೆ ಜೀವ

ಕಾವ್ಯಸಂಗಾತಿ

ಹಳೆ ಜೀವ

ಸವಿತಾ ಮುದ್ಗಲ್

ಬೆಲೆಯೆಲ್ಲಿದೆ ಪ್ರಪಂಚದ
ಹಳೆ ಜೀವಕೆ
ಬೆಂದು ಹೋಗಿದೆಯೆಲ್ಲಾ
ಬಾಳಿನ ಬಯಕೆ

ಬೇಡಿದರು ಕರುಣಿಸಲ್ಲ
ಸಾವಿನ ದಾರಿಗೆ
ಬೇಕಾಬಿಟ್ಟಿ ಕರೆಯುವರು
ಒಲ್ಲದ ಬಾಳಿಗೆ

ನಮ್ಮವರು ಯಾರೆಂದು
ತಿಳಿಯದೆ ಮನಕೆ
ನಮ್ಮತನ ಕಳೆದುಕೊಂಡು
ಬದುಕಿದೆ ಜೀವನಕೆ

ಇಳಿದೋದ ಶಕ್ತಿಯನ್ನು
ಮರುಪಡೆಯದೆ ನಾನು
ಇಳಿಮುಖದ ಕಣ್ಣನ್ನು
ಹೊತ್ತು ಬದುಕಿದೆ ಇನ್ನು!


One thought on “ಸವಿತಾ ಮುದ್ಗಲ್ ಕವಿತೆ-ಹಳೆ ಜೀವ

Leave a Reply

Back To Top