ವರಕವಿ  ದ. ರಾ ಬೇಂದ್ರೆಯವರ  ” ಬೆಳಗು” ಪದ್ಯ.

ವಿಶೇಷ ಲೇಖನ

ವರಕವಿ  ದ. ರಾ ಬೇಂದ್ರೆಯವರ  ” ಬೆಳಗು” ಪದ್ಯ.

ಸುಲಭಾ ಜೋಶಿ ಹಾವನೂರ.

ಬೆಳಗು.



     ಮೂಡಲ ಮನೆಯಾ ಮುತ್ತಿನ ನೀರಿನ
     ಎರಕಾವ ಹೂಯ್ದ,ನುಣ್ನನೆಎರಕಾವ ಹೂಯ್ದ.

     ಬಾಗಿಲ ತೆರೆದು ಬೆಳಕು ಹರಿದು
     ಜಗವೆಲ್ಲ ತೂಯ್ದ,ದೇವನು ಜಗವೆಲ್ಲ ತೂಯ್ದ.

  ರತ್ನದ ರಸದಾ ಕಾರಂಜೀಯೂ.
     ಪುಟ ಪುಟನೇ ಪುಟಿದು.
     ತಾನೇ-ಪುಟ ಪುಟನೇ ಪುಟಿದು.
     ಮಘಮಘಿಸುವಾ ಮುಗಿದ ಮೂಗ್ಗೀ.
     ಪಟಪಟನೇ ಒಡೆದು.
     ತಾನೇ-ಪಟಪಟನೇ ಒಡೆದು.

   ‌  ಎಲೆಗಳ ಮೇಲೆ, ಹೂಗಳ ಒಳಗೆ.
     ಅಮ್ರತದ ಬಿಂದು,ಕಂಡವು ಅಮ್ರುತದ ಬಿಂದು.
     ಯಾರಿರಿಸಿಹರು ಮುಗಿಲಿನ ಮೇಲಿಂದ.
     ಇಲ್ಲಿಗೆ ಇದ ತಂದು,ಈಗ ಇಲ್ಲಿಗೆ ಇದ ತಂದು.

     ತಂಗಾಳಿಯಾ ಕೈಯೂಳಗಿರಿಸೀ.
     ಎಸಳಿನಾ ಚವರಿ.
     ಹೂವಿನಾ ಎಸಳಿನಾಚವರಿ.
     ಹಾರಿಸಿ ಬಿಟ್ಟಿತು ತುಂಬಿಯದಂಡು.
     ಮೈಯೆಲ್ಲಾ ಸವರಿ
     ಗಂಧ -ಮೈಯೆಲ್ಲಾ ಸವರಿ.

     ಗಿಡಗಂಟೆಗಳಾ ಕೂರಳೂಳಗಿಂದ.
     ಹಕ್ಕಿಗಳ ಹಾಡು.
     ಹೂರಟಿತು ಹಕ್ಕಿಗಳ ಹಾಡು.
     ಗಂಧರ್ವರ ಸೀಮೆಯಾಯಿತು.
     ಕಾಡಿನ ನಾಡು.
     ಕ್ಷಣದೂಳು-ಕಾಡಿನನಾಡು.

     ಕಂಡಿತು ಕಣ್ಣು ಸವಿದಿತು ನಾಲಗೆ.
     ಪಡೆದೀತೀ ದೇಹ.
     ಸ್ಪರ್ಶಾ-ಪಡೆದೀತೀ ದೇಹ.
     ಕೇಳಿತು ಕಿವಿಯು ಮೂಸಿತು ಮೂಗು
     ತನ್ಮಯವೀ ಗೇಹಾ
      ದೇವರ-ದೀ ಮನಸಿನ ಗೇಹಾ.

     ಅರಿಯದು ಅಳವು ತಿಳಿಯದು.ಮನವು.
     ಕಾಣs ದೋ ಬಣ್ಣ.
     ಕಣ್ಣಿದೆ-ಕಾಣS ದೋ ಬಣ್ಣ.
     ಶಾಂತಿರಸವೇ ಪ್ರೀತಿಯಿಂದಾ.ಡ
     ಮೈದೋರಿತಣ್ನ.
     ಇದು  ಬರಿ-ಬೆಳಗಲ್ಲೋ ಅಣ್ಣಾ.

               ರಚನೆ:ಅಂಬಿಕಾತನಯದತ್ತ.

**

 ವರಕವಿ ಎಂದೇ ಪ್ರಸಿಧ್ದರಾದ ಬೇಂದ್ರೆಯವರು ತಮ್ಮಜಾನಪದ ಸತ್ವ  ಸಮ್ರಧ್ದಿ ಮತ್ತು ವಾಗ್ವೈಖರಿಯ ಪ್ರೌಢಿಮೆಯಿಂದ  ಕನ್ನಡ ಕಾವ್ಯ ಕ್ಷೇತ್ರವನ್ನು ಶ್ರೀಮಂತಗೂಳಿಸಿದ ಧೀಮಂತರು. ಅವರ  ನಿಸರ್ಗ ಕಾವ್ಯಗಳು ನಾದ  ಅರ್ಥ ಲಯಗಳಿಂದ ತುಂಬಿ ತುಳುಕುವವು.ಒಂದು ವಿಶಿಷ್ಠ  ಪ್ರಕಾರದ  ಅದ್ವಿತೀಯ‌ ಆನಂದವನ್ನು ಶ್ರವಣೇಂದ್ರಿಯಕ್ಕೇ ನೀಡುವುದು.  ಅಲ್ಲದೆ  ಶಬ್ದಗಳ  ತಾಲೀಮು ,ಪ್ರಾಸಗಳ ಕುಣಿತ,ಮಾಧುರ್ಯ ‌ ಮತ್ತು ಶಬ್ದಗಳ ಪ್ರಖರತೆ ಅಗಾಧವೆನಿಸುವಂತಿದೆ. ಹಾಡುವುದಕ್ಕೆ ಬಲು ಸಹಜವೆನಿಸುವ ರಮ್ಯತೆಯಿಂದ ಕೂಡಿವೆ.

           ಅಂಬಿಕಾತನಯದತ್ತ  ಎಂಬ ಕಾವ್ಯನಾಮ  ಹೂಂದಿದ  ಬೇಂದ್ರೆ ಯವರು  ನಿರ್ಸಗ  ರಮಣೀಯತೆಯನ್ನು  ಕಣ್ಣಿಗೆ   ಕಟ್ಟುವಂತೆ ಚಿತ್ರಿಸಿರುವರು.ಇದಕ್ಕೆ ಅಸಂಖ್ಯ  ಉದಾಹರಣೆಗಳನ್ನು  ಕೂಡಬಹುದು. ಸತ್ಯ,ಶಿವ,ಸುಂದರತೆ  ಇವರ ಕಾವ್ಯದ ಸ್ಥಾಯಿಭಾವ.ಭಾವಕ್ಕೆ  ತಕ್ಕಂತೆ ಪ್ರಾಸಗಳು  ಸರಸರನೆ ಬಲು ಸಹಜವಾಗಿ ಹೆಣೆದು ಕೂಳ್ಳುತವೆ. ವರಕವಿ ಬೇಂದ್ರೆಯವರು ಇಟ್ಟ  ಶಬ್ದಗಳ ಹಿಂದೆ ಅರ್ಥ ತಾನಾಗಿಯೇ ಒಡೋಡಿ ಬಂದಂತೆ  ಅನಿಸುತ್ತದೆ. ಅಷ್ಟೂಂದು  ಸಹಜತೆ  ಅಷ್ಟೂಂದು  ವಿದಗ್ಧತೆ ಇವರ  ಪ್ರತಿಯೂಂದು  ಕಾವ್ಯದ ಸ್ವರೂಪವೇ ಹೌದು.

             ಬೇಂದ್ರೆಯವರ   “”ಬೆಳಗು”” ಪದ್ಯದಲ್ಲಿಯ  ಭಾವಪ್ರಪಂಚದ ನವೀರತೆ  ,ಭವ್ಯತೆ,  ರಮಣೀಯತೆ  ಎಲ್ಲವೂ  ಕಲ್ಪನೆಯ  ಸುಂದರ ಮನೋಹರತೆಯಲ್ಲಿ  ಅದ್ದಿ ತೆಗೆದ ಸಾಕ್ಷಾತ  ಸ್ವರೂಪ ಎನಿಸುವುದು .
ನಿಸರ್ಗ ಮತ್ತು ಮಾನವನ  ಸಂವಾದ  ನಡೆದಿರುವಂತೆ ಎನಿಸುವುದು.ಈ ಕಾವ್ಯ ಒದುತ್ತಲಿರುವಾಗ ಬೆಳಗಿನ  ಪ್ರಕ್ರಿಯೆ ಚರಾ ಚರತೆಯೂಂದಿಗೆ ನಮ್ಮ  ಕಣ್ನೆದುರೆ  ಚಿತ್ರಿತವಾಗುತ್ತಿರುವಂತೆ,   ಮೂಡಲಮನೆಯಾ, ಮುತ್ತಿನ ನೀರಿನ,ಎಂದು ಚಿಮುಕಿಸಿದ    ಥಳಿಯ ಪ್ರಶಾಂತ  ನಯ ನಾಜೂಕಿನ  ವಾತಾವರಣವನ್ನು    ಶಬ್ದಗಳಲ್ಲಿ    ಹಿಡಿದಿಡುವ  ಕವಿಯ ಅನುಭವದ ಆನಂದವೇ ಒಂದು  ಅನಾಹತ  ನಾದವೆನಿಸುವುದು.

                    ಚೈತನ್ಯಮಯವಾದ  ಇವರ ಕಲ್ಪನಾ ಶಕ್ತಿ  ಅಭಿವ್ಯಕ್ತಿಸುವ ರೂಪ  ಒಂದರಂತೆ  ಮತ್ತೂಂದಿಲ್ಲ.ನಿಸರ್ಗ  ಕವಿತೆಗಳಂತೂ   ಇದಕ್ಕೆ ಅಪ್ರತಿಮ  ಉದಾಹರಣೆಗಳಾಗಿವೆ  .ಆಡುಮಾತಿನ   ಸಹಜ ಶಬ್ದಗಳಾದರೂ  ಸಹ  ವಿಸ್ಮಯಜನಕ ವೈವಿಧ್ಯಮಯತೆಯ ಅರ್ಥವನ್ನು ನಿರೂಪಿಸುವವು” “.ಮೂಡಲ  ಮನೆಯಾ  ಮುತ್ತಿನ ‌‌ನೀರಿನ”” ಎಂದು ಆರಂಭವಾಗುವ  ಬೇಂದ್ರೆಯವರ “” ಬೆಳಗು” ” ಪದ್ಯ ಕೇವಲ ಬೆಳಕು, ಮುಂಜಾವು, ಸೂರ್ಯೋದಯ ಎಂದಾಗದೆ  “”ಬೆಳಗು””  ಎಂಬುದು ಬೆಳಕಿನ  ಕ್ರಿಯಾತ್ಮಕತೆಯ ,  ಲವಲವಿಕೆಯ  ,ಚೈತನ್ಯಶೀಲತೆಯ, ಪಾರದರ್ಶಕತೆಯ  ಆಳವಾದ  ಧ್ವನ್ಯಾರ್ಥವನ್ನು ಅಭಿವ್ಯಕ್ತಿಸುವುದು. ಕೂನೆಗೆ  “”ಇದು ಬರಿ ಬೆಳಗಲ್ಲೂ”” ಎಂದಾಗ  ಕಾವ್ಯಾರ್ಥ ಧ್ವನ್ಯಾರ್ಥದ ಉತ್ತೂಂಗ  ಶಿಖರವೇರಿದಂತೆ  ಎನಿಸುವುದು.ಈ ವಾಕ್ಯದಲ್ಲಿಯ  ಅರ್ಥ ವೈವಿಧ್ಯದೂಂದಿಗೆ ಅರುಣೋದಯದಲ್ಲಿ ಮುಳುಗಿದ  ವಸುಂಧರೆಯ ಪ್ರಶಾಂತ  ತನ್ಮಯ  ಚಿತ್ತ  ಅಸೀಮವಾದ   ಅರ್ಥ ನಾವಿನ್ಯತೆಗೆ ನಾಂದಿ ಯಾಗುವುದು.ದ್ಯಾವಾ-ಪ್ರಥ್ವಿಯ ಆತ್ಮೀಯತೆ, ಆಗಸದಲ್ಲಿ ಆದಿತ್ಯನ ಆಗಮನ” “ಮೂಡಲ ಮನೆಯಾ ಮುತ್ತಿನ ನೀರಿನ” ಬಾಗಿಲ ತೆರೆದು ಬೆಳಕು ಹರಿದು ಜಗವೆಲ್ಲ ತೂಯ್ದಾ” ಎಂಬ ಮುಂಜಾವಿನ ಶಾಂತ ಸೌಂದರ್ಯದ  ಅರ್ಥ  ಅನಂತವೆನಿಸುವುದು .ಈ ಪದ್ಯದ ಕೂನೆಯಲ್ಲಿ.
 “” ಶಾಂತಿರಸವೇ ಪ್ರೀತಿಯಿಂದ ಮೈದೋರಿದಂತಿದೆ” “ಎಂಬ ಅಭಿವ್ಯಕ್ತಿ, ವರಕವಿ  ಬೇಂದ್ರೆಯವರ  ಸ್ಪೂರ್ತಿಯ  ಸಾಗರದೂಳಗಿನಿಂದ    ಆವಿರ್ಭವಿಸಿ ಮುತ್ತಿನಮಣಿಗಳಂತೆ  ಕಾಣುವುದು.ಅತ್ಯಂತ ಸಹಜವಾಗಿ ಇಟ್ಚ  ಪದವಿನ್ಯಾಸ  ಕೆಲವೂಮ್ಮೆ ಕವಿ ಪ್ರತಿಭೆಯ ಚಮತ್ಕಾರವೆಂಬಂತೆ ಕವಿ ಮತ್ತು ಒದುಗನ ನೀರಿಕ್ಷೆ  ಮೀರಿ ಸರ್ವತೂಮುಖ ಅರ್ಥ ಹೂಮ್ಮಿ ಬಿಡುವುದು.ಇದುಅಂಬಿಕಾತನಯದತ್ತ(ಬೇಂದ್ರೆಯವರ ಕಾವ್ಯನಾಮ)ರ ಕಾವ್ಯಸ್ರುಷ್ಠಿಯ ಅನುಪಮ  ಮನೋಹರ ಬೆಳಗು  ಒದುಗನನ್ನು ಮಂತ್ರ ಮುಗ್ದನನ್ನಾಗಿಸುತ್ತದೆ.ಎಷ್ಟೆಲ್ಲಾ ರೀತಿಯಿಂದ ವರ್ಣಿಸಿದರೂ ಕವಿಮನ ಮತ್ತೆ”” ಅರಿಯದು ಅಳವು ತಿಳಿಯದು ಮನವು ಕಾಣದೋ ಬಣ್ಣ”  ಎಂದಾಗ,ನಿಸರ್ಗದ ಭವ್ಯತೆ,ರಮಣೀಯತೆ ಮತ್ತು ಗಹನತೆಯ ಸೂಗಸು  ‌ಕಾಣುವುದು.  ನಿಸರ್ಗದೂಂದಿಗೆ   ಕವಿಯ ಅನುಸಂಧಾನ ನಡೆದಂತೆ  ಒಂದು  ವಿಶಿಷ್ಠ ಆತ್ಮೀಯತೆ ಕಂಡು ಬರುವುದು.

                          ಬೆಳಗು.
                ================
     ಮೂಡಲ ಮನೆಯಾ ಮುತ್ತಿನ ನೀರಿನ
     ಎರಕಾವ ಹೂಯ್ದ,ನುಣ್ನನೆಎರಕಾವ ಹೂಯ್ದ.

     ಬಾಗಿಲ ತೆರೆದು ಬೆಳಕು ಹರಿದು
     ಜಗವೆಲ್ಲ ತೂಯ್ದ,ದೇವನು ಜಗವೆಲ್ಲ ತೂಯ್ದ.

  ರತ್ನದ ರಸದಾ ಕಾರಂಜೀಯೂ.
     ಪುಟ ಪುಟನೇ ಪುಟಿದು.
     ತಾನೇ-ಪುಟ ಪುಟನೇ ಪುಟಿದು.
     ಮಘಮಘಿಸುವಾ ಮುಗಿದ ಮೂಗ್ಗೀ.
     ಪಟಪಟನೇ ಒಡೆದು.
     ತಾನೇ-ಪಟಪಟನೇ ಒಡೆದು.

   ‌  ಎಲೆಗಳ ಮೇಲೆ, ಹೂಗಳ ಒಳಗೆ.
     ಅಮ್ರತದ ಬಿಂದು,ಕಂಡವು ಅಮ್ರುತದ ಬಿಂದು.
     ಯಾರಿರಿಸಿಹರು ಮುಗಿಲಿನ ಮೇಲಿಂದ.
     ಇಲ್ಲಿಗೆ ಇದ ತಂದು,ಈಗ ಇಲ್ಲಿಗೆ ಇದ ತಂದು.

     ತಂಗಾಳಿಯಾ ಕೈಯೂಳಗಿರಿಸೀ.
     ಎಸಳಿನಾ ಚವರಿ.
     ಹೂವಿನಾ ಎಸಳಿನಾಚವರಿ.
     ಹಾರಿಸಿ ಬಿಟ್ಟಿತು ತುಂಬಿಯದಂಡು.
     ಮೈಯೆಲ್ಲಾ ಸವರಿ
     ಗಂಧ -ಮೈಯೆಲ್ಲಾ ಸವರಿ.

     ಗಿಡಗಂಟೆಗಳಾ ಕೂರಳೂಳಗಿಂದ.
     ಹಕ್ಕಿಗಳ ಹಾಡು.
     ಹೂರಟಿತು ಹಕ್ಕಿಗಳ ಹಾಡು.
     ಗಂಧರ್ವರ ಸೀಮೆಯಾಯಿತು.
     ಕಾಡಿನ ನಾಡು.
     ಕ್ಷಣದೂಳು-ಕಾಡಿನನಾಡು.

     ಕಂಡಿತು ಕಣ್ಣು ಸವಿದಿತು ನಾಲಗೆ.
     ಪಡೆದೀತೀ ದೇಹ.
     ಸ್ಪರ್ಶಾ-ಪಡೆದೀತೀ ದೇಹ.
     ಕೇಳಿತು ಕಿವಿಯು ಮೂಸಿತು ಮೂಗು
     ತನ್ಮಯವೀ ಗೇಹಾ
      ದೇವರ-ದೀ ಮನಸಿನ ಗೇಹಾ.

     ಅರಿಯದು ಅಳವು ತಿಳಿಯದು.ಮನವು.
     ಕಾಣs ದೋ ಬಣ್ಣ.
     ಕಣ್ಣಿದೆ-ಕಾಣS ದೋ ಬಣ್ಣ.
     ಶಾಂತಿರಸವೇ ಪ್ರೀತಿಯಿಂದಾ.ಡ
     ಮೈದೋರಿತಣ್ನ.
     ಇದು  ಬರಿ-ಬೆಳಗಲ್ಲೋ ಅಣ್ಣಾ.

               ರಚನೆ:ಅಂಬಿಕಾತನಯದತ್ತ.



   

                 ಮುಂಜಾವಿನ. ಕಿರಣಗಳು  ರತ್ನದ  ರಸದ  ಕಾರಂಜಿಯಂತೆ ಪುಟಿಪುಟಿದು  ಚಿಮ್ಮಿದಾಗ   ಸುಗಂಧಮಯ  ಹೂವಿನ  ಮೂಗ್ಗು    ಪಟಪಟನೆ  ಅರಳುವ  ವಿಧಾನದ ಸೂಗಸು ಬೇಂದ್ರೆಯವರ ಶಬ್ದಗಳಲ್ಲಿ  ಆಡುಮಾತಿನಲ್ಲೇ  ಹೂರಹೂಮ್ಮುವ   ಸ್ರುಜನಾತ್ಮಕತೆಯ  ವೈಖರಿ  ಅಪ್ರತಿಮವಾಗಿದೆ.ಭೂಮಿಯ  ಮೇಲಿನ  ಪ್ರತಿಯೂಂದು    ಚರಾಚರ ವಸ್ತುವಿನ ಕಾರ್ಯವಿಧಾನ ಹಂತಹಂತವಾಗಿ  ಕಲ್ಪನೆಯ ಕಲಶದಿ  ಉತ್ಸಾಹದ  ಭಾವಧಾರೆಯೂಂದಿಗೆ  ರಸಾಸ್ವಾದದ  ಅಭಿಲಾಷೆಯ ಅಂತ:ಸತ್ವದೂಂದಿಗೆ  ಮುಂದುವರಿಯುತ್ತ  ಲಕ್ಷಣವಾದ “ಬೆಳಗು”. ಅಪರಿಮಿತವಾದ  ಧನ್ಯತೆಯನ್ನು   ಅನಾವರಣಗೂಳಿಸುವುದು.ಎಲೆಗಳ ಮೇಲೆ,ಹೂಗಳ  ಒಳಗೆ  ಅಮ್ರುತದ ‌ ಬಿಂದು ಕಂಡವು ಅಮ್ರುತದ ಬಿಂದು”” ಎಂದೆಲ್ಲಾ ರೂಪಕಾತ್ಮಕವಾಗಿ ವರ್ಣಿಸಿದರೂ,ದವಬಿಂದು ನೋಡಿ  ಅದ್ಭುತ  ರಮ್ಯತೆಗೆ ಮನಸೋತ ಕವಿ ಮತ್ತೆ””ಯಾರಿರಿಸಿಹರು ಮುಗಿಲಿನ  ಮೇಲಿಂದ  ಇಲ್ಲಿಗೆ  ಇದ(ಇಬ್ಬನಿ)  ತಂದು ಈಗ ಇಲ್ಲಿಗೆ ಇದ ತಂದು ಎಂಬ ಕುತೂಹಲ ಮತ್ತು ಉದ್ಗಾರ ಎಷ್ಟೂಂದು  ನೈಜ್ಯವಾಗಿ ಹೂರಹೂಮ್ಮಿದೆ.

                ತಂಗಾಳಿಗೆ  ಅಲುಗಾಡಿದ  ಪುಷ್ಪ ,ಮುಂದೆ ವರಕವಿ ಬೇಂದ್ರೆ ಪುಷ್ಪಗಳ ಪರಿಮಳ ವಾತಾವರಣದಲ್ಲಿ ಪಸರಿಸುವ ಬಗೆಗೆ ಕಲ್ಪಿಸಿದ ಕಾಲ್ಪನಿಕ ಸೌಂದರ್ಯ (Imaginative beauty)  ಎಷ್ಟೂಂದು ಲಾವಣ್ಯಮಯವಾಗಿದೆ ಎಂದರೆ  ನಿರ್ಸಗದ   ಪ್ರತಿಯೂಂದು ವಸ್ತುವೂಳಗಿನ  ಆತ್ಮೀಯತೆಯ  ಸೌಂದರ್ಯಾನುಭುತಿಯ   ಪರಿಕಲ್ಪನೆಯೆನಿಸುವುದು.ಆಂಗ್ಲಭಾಷೆಯ ಸುಪ್ರಸಿಧ್ದ  ರೋಮ್ಯಾಂಟಿಕ ಕವಿ ಕೀಟ್ಸ (John keats) ನ  ಪದ್ಯ ಸ್ಮರಣೆಗೆ  ಬರುವುವದು “”A thing of beauty is a joy forever””.ಸವರಿದ ಪರಿಮಳದ ಗಂಧ,ಪುಷ್ಪದ  ಎಸಳಿನ  ಚವರಿಯನ್ನು  ತಂಗಾಳಿಯ ಕೈಗಿಡುವುದು, ದುಂಬಿಗಳು ಹಾರುವುದು ಅವುಗಳೂಂದಿಗೆ ಪಸರಿಸುವ ಪರಿಮಳದ ಅದ್ಭುತ  ಚಿತ್ರಣ  ಎನಿಸುವುದು.”” ಗಿಡಗಂಟೆಗಳ. ಕೂರಳೂಳಗಿಂದ ಹಕ್ಕಿಗಳಾ  ಹಾಡು” “ಗಂಧರ್ವರಾ  ಸೀಮೆಯಾಯಿತು ಕಾಡಿನಾ ನಾಡು””ಗಿಡಗಂಟೆಗಳಾ  ಕೂರಳೂಳಗಿಂದ”” ಎಂದೆನ್ನುವಕವಿವಾಕ್ಯ ನಿಸರ್ಗದೂಳಗೆ ಗಿಡಗಂಟೆ ಮತ್ತು ಹಕ್ಕಿಗಳ ಅವಿನಾಭಾವ ಸಂಬಂಧ ಗಿಡಗಂಟೆ,ಟೂಂಗೆಗಳೆಲ್ಲ ಹಕ್ಕಿಗಳ ಸಂಗೀತಕ್ಕೆ ವೇದಿಕೆಯಾದಂತೆ ಮಕ್ಕಳು  ಮನೆಗೆ  ಬಂದಂತೆ  ವ್ರಕ್ಷಗಳ ಮೇಲೆ ಪಕ್ಷಿಗಳು ಹಾರಿ ಬಂದು ಕುಳಿತಾಗ ಗಿಡ ಅಂತ:ಕರಣದಿ ಆನಂದದಿ   ಉಸ್ಫೂತವಾಗಿ ಹಾಡಿದಂತೆ ಒದುಗನಿಗೆ ಒದಿದಷ್ಟು ಅರ್ಥ   ಹೂಮ್ಮುವವು .ಇದುಬೇಂದ್ರೆಕಾವ್ಯದ ವೈಶಿಷ್ಠ್ಯ.   

             ಬೆಳಗಿನ. ಸೌಂದರ್ಯಾನುಭೂತಿಯನ್ನು ಅನುಭವಿಸಿದ ದೇಹ,ಸವಿದ ನಾಲಿಗೆ,ಅನುಭವಿಸಿದ ದೇಹ ಆಲಿಸಿದ  ಕಿವಿ  ಕಂಡ ಕಣ್ಣು         ಮೂಸಿದಮೂಗು,ಎನ್ನುತ್ತಾಮುಂದೆ “”ಅರಿಯದುಅಳವು ತಿಳಿಯದು ಮನವು”” ಎಂದಾಗ ನಿಸರ್ಗದ ಭವ್ಯತೆ,ರಮ್ಯತೆಯೂಂದಿಗೆ, ಕವಿಯ ಅನುಸಂಧಾನ  ನಡೆದಂತೆನಿಸುವುದು .ನಿಸರ್ಗದ  ಚೆಲುವು-ಒಲವು ನಿಖರ   ಚಾರುತ್ವವನ್ನು ಆಸ್ವಾದಿಸುವ  ಅರ್ಥವಂತಿಕೆಯ‌  ಸಾರ್ಥಕ ಸಂವೇದನೆಯನ್ನು ಸರಳ ಸಹಜ  ಶಬ್ದಗಳ   ನಾದಮಯತೆಯನ್ನು ಹೂಂದಿರುವ” “ಬೆಳಗು”” ಆತ್ಯಂತ ಸುಂದರ  ಅಭಿವ್ಯಕ್ತಿಯಾಗಿದೆ.

             “” ಬೇಂದ್ರೆಯವರ. ಕಲ್ಪನಾಶಕ್ತಿ ಇಷ್ಟೂಂದು  ಚೈತನ್ಯಮಯ ಆಗಿರುವದರಿಂದಲೇ ಅದು ತೂಡುವ ರೂಪಗಳಿಗೆ ಲೆಕ್ಕವೇ  ಇಲ್ಲ”” . ಎಂದಿರುವರು ಪ್ರಖ್ಯಾತ  ವಿರ್ಮಶಕರಾಗಿದ್ದ  ಕೀರ್ತಿನಾಥ  ಕುರ್ತಕೋಟಿ ಯವರು.ಈ ಪದ್ಯದಲ್ಲಿಯ ನಾದ ಮತ್ತು  ಲಯ ಭಾವಗೀತೆಯ ವೈಶಿಷ್ಠ್ಯವನ್ನು  ಎತ್ತಿ ಹಿಡಿಯುತ್ತದೆ.ಅಂಬಿಕಾತನಯದತ್ತರ ಭಾಷೆ ತಂತುವಾದ್ಯವಾಗಿ   ನೂರಾರು   ಶ್ರುತಿಗಳಿಗೆ   ಮಿಡಿಯಬಲ್ಲುದು. ಭಾವಲಹರಿಯ ತನ್ಮಯತೆ, ಯಾವ ಗಡಿಬಿಡಿಯಿಲ್ಲದ ಗಂಧರ್ವ ಲೋಕದ  ಬೆಳಗು ಭೂಮಿಯ ಮೇಲಿನ  ವಿಪುಲ  ಸಫಲತೆಯ  ಅರ್ಥ
 ವಿನ್ಯಾಸವನ್ನು  ಪಡೆಯುತ್ತದೆ.

——————————————




 ‌‌‌‌‌‌ಕಾವ್ಯದಲ್ಲಿಯ ಪ್ರಮುಖ ನಾಲ್ಕು ಸೌಂದರ್ಯಗಳಾದ

       1)ಕಾಲ್ಪನಿಕ ಸೌಂದರ್ಯ(Imaginative beauty).
       2)ಬೌಧ್ಧಿಕ ಸೌಂದರ್ಯ(Intellectual  beauty).
       3)ಆರ್ದಶದ ಸೌಂದರ್ಯ(Ideal beauty).
       4)ಐಂದ್ರಿಕ ಸೌಂದರ್ಯ(Senses beauty).   ಮುಂತಾದವುಗಳು
       ಬೇಂದ್ರೆಯವರ ಅಸಂಖ್ಯ ಕಾವ್ಯಗಳಲ್ಲಿ ಅನುಭವಗಮ್ಯವೆನಿಸುವು.



5 thoughts on “ವರಕವಿ  ದ. ರಾ ಬೇಂದ್ರೆಯವರ  ” ಬೆಳಗು” ಪದ್ಯ.

  1. ಭಾವನೆಗಳ ಬೆಳಗು…ತುಂಬಾ ಸುಂದರವಾದ ವಿಮರ್ಶೆ.. ಹಮೀದಾ ಬೇಗಂ. ಸಂಕೇಶ್ವರ.

  2. ಅದ್ಭುತ ಕಾವ್ಯ. ಉತ್ತಮ ವಿಶ್ಲೇಷಣೆ.

Leave a Reply

Back To Top