ಅನುವಾದಿತ ಕವಿತೆ-ನಿನ್ನಂತ್ಯವೇ ನಿನ್ನ ಪ್ರಾರಂಭ

ಅನುವಾದ ಸಂಗಾತಿ

ನಿನ್ನಂತ್ಯವೇ ನಿನ್ನ ಪ್ರಾರಂಭ

ಇಂಗ್ಲೀಷ್ : ಟಿ.ಎಸ್. ಇಲಿಯಟ್

ಕನ್ನಡಕ್ಕೆ: ಬಾಗೆಪಲ್ಲಿ ಕೃಷ್ಣಮೂರ್ತಿ

.

ನೋಬೆಲ್ ಪ್ರಶಸ್ತಿ ವಿಜೇತ ಟಿ.ಎಸ್. ಇಲಿಯಟ್ ಅವರ ” ಫೋರ್ ಕ್ವಾರ್ಟೆಸ್ಸ” ಎಂಬ ನಾಲ್ಕು ಭಾಗವುಳ್ಳ ಉದ್ದನೆಯ ಕವಿತೆಯ ಕೊನೆಯ ಹಲವು ಸಾಲಿನ ಅನುವಾದವಿದು. ಈ ಪದ್ಯ “ನಿನ್ನಂತ್ಯವೇ ನಿನ್ನ ಪ್ರಾರಂಭ” ಎಂಬ ಸಾಲಿನಿಂದ ಕೊನೆಗೊಳ್ಳುತ್ತದೆ.

ಒಳ್ಳೆಯ/ಕೆಟ್ಟ ಎಲ್ಲಾ ಮನುಷ್ಯರ ಅಂತ್ಯ ಸಾವೊಂದೇ, ಹಾಗೂ ನಿರಾಕಾರ ಸ್ಥಿತಿ ಅನಿವಾರ್ಯ, ಪನರಾರಂಭಕೆ ಸಿದ್ದತೆಗೆ ಎಂದೂ, ಪವಿತ್ರ ಬೈಬಲ್ ಉಕ್ತಿಯಂತೆ ” ಕೊನೆ ಮೊದಲಾಗುವುದು-ಮೊದಲು ಕೊನೆಯಾಗುವುದು” ಎಂಬ ಅರ್ಥಕ್ಕೆ ಹೋಲಿಸುತ್ತಾರೆ.

ಈ ಕೆಳಸಾಲುಗಳು ಜೀವ ನಿರ್ಜೀವ ಎಲ್ಲದಕೂ ಚಕ್ರದಂತ  ಆಧ್ಯಾತ್ಮಿಕ ಪಯಣ ಇರುವುದೆಂದೂ ಸೂಚಿಸುತ್ತದೆ.

ಕವಿತೆಯ ಮೊದಲ ಸಾಲನ್ನು ಅಂತ್ಯವಾಗಿಸಿ ಬರೆಯುವ ಕಲಾತ್ಮಕ ತಂತ್ರಗಳಲಿ ಒಂದೆಂದೂ ಹೇಳುವರು.ವಿಭಿನ್ನ ಗ್ರಹಿಸಿದವರು ತಿದ್ದುಪಡಿಗೆ ಸೂಚಿಸಲು ಸ್ವಾಗತವಿದೆ.

ನಿನ್ನಂತ್ಯವೇ ನಿನ್ನ ಪ್ರಾರಂಭ

ನಮ್ಮ ವಾಸ ಗೃಹದಿಂದಲೇ ಸಕಲವೂ ಪ್ರಾರಂಭ!

ನಾವು ಬೆಳೆದಂತೆ ಜಗತ್ತು ನಮಗೆ ಅಪರಿಚಿತವಾಗುತ್ತಾ ಹೋಗುತ್ತದೆ.

ಇಲ್ಲಿ ಜೀವ ಮತ್ತು ನಿರ್ಜೀವ ವಸ್ತುಗಳ ಒಳ ವಿನ್ಯಾಸವೇ ಗೊಂದಲಮಯವಾಗಿವೆ

ತೀಕ್ಷ್ಣ ಅವಗಡ, ಚದುರಿ ಬೇರ್ಪಟ್ಟ ಘಟನೆಗಳಲ್ಲಿ

ಮೊದಲಿನದಾವುದು ನಂತರದ್ದಾವುದು ಅರಿವಿಗೆ ಸಿಗದು.

ಒಬ್ಬ ಮನುಷ್ಯನ ಜೀವಿತಾ ವಧಿ ಮಾತ್ರವಲ್ಲದೆ, ನಿಗೊಢ ಶಿಲಾ ರಾಶಿಯ ಜೀವಿತಾವಧಿಯ ಪ್ರತಿ ಕ್ಷಣವೂ ಹೊತ್ತಿ ಉರಿಯುತ್ತಿದೆ.

ಆದರೆ ,ಸಂಧ್ಯಾಕಾಲಕೆ ನಕ್ಷತ್ರ ಬೆಳಕಿನಡಿ, ಅಂತೆಯೇ ದೀಪದ ಬೆಳಕಿನಡಿಯ ಲಿ ಸಮಯವೆಂಬುದುಂಟು.

ಲಿಕ್ಕಕೆ ಬಾರದ ಸಣ್ಣ ಪುಟ್ಟ ಅಡೆತಡೆ ಇರುವುದ ಬಿಟ್ಟು.

ಪ್ರೀತಿ ಎನ್ನುವುದು ಮಾತ್ರ ಸಾಧ್ಯವಾದಷ್ಟೂ ಬದಲಾಗದೆ  ಇದ್ದಂತೆ ಇದೆ.

ಸಮಾಜದ ಹಿರಿಯರಿದನು ಗ್ರಹಿಸಿ ಸರ್ವರೂಳಿತಾಗ ಬೇಕು.

ಇಲ್ಲಿ ಅಲ್ಲೆಂಬುದು ಪ್ರಾಮುಖ್ಯವಿಲ್ಲದೆ ನಾವುಗಳು ಇನ್ನಷ್ಟು ಮತ್ತಷ್ಟು ಒಂದರಿಂದಿನ್ನೊಂದು ತೀಕ್ಷ್ಣತೆಗೆ ಮುಂದುವರಿಯಬೇಕು.

ಸರ್ವರ ಒಗ್ಗಟ್ಟು ಮತ್ತು ಸಂಪರ್ಕಕ್ಕಾಗಿ”

ಅದೆಂತಹ ಗಾಢ ಚಳಿ, ಪಾಳುಬಿದ್ದ ಸ್ಥಳಗಳ ಮೂಲಕ,

ಸಾಗರದ ಭೊರ್ಗೆರತ ಬಿರುಗಾಳಿಯ  ಬೊಬ್ಬಿಡುವಿಕೆಯಲೂ ಜೀವಿಸುವ ಹಾರುವ ಆಲ್ಬಟ್ರಾಸ್ ಹಕ್ಕಿಯಂತೆ ಈಜುವ ಬೃಹತ್ ಢಾಲ್ಫಿನ್ ಮೀನಿನಂತೆ.

ನಿನ್ನಂತ್ಯವೇ ನಿನ್ನ ಆರಂಭ.


Leave a Reply

Back To Top