ಕಾವ್ಯ ಸಂಗಾತಿ
ಭಾವಗೀತೆ
ಡಾ. ಸದಾಶಿವ ದೊಡಮನಿ
ಭಾವಗೀತೆ ಬರೆಯದೆ ಇದ್ದರೆ
ಬಾಳಿಗೆ ಎಲ್ಲಿದೆ ಬೆಲೆ
ಬಾಳ ಗೀತೆ ಹಾಡದೆ ಇದ್ದರೆ
ಬದುಕಿಗೆ ಎಲ್ಲಿದೆ ನೆಲೆ
ಹಾಡುವ ಕನಸು ಹಣ್ಣಾಗಿದ್ದರೆ
ಹೆಣ್ತನ ಕಣ್ತೆರೆಯುವುದು ಮನದೊಳಗೆ
ಹೆಗಲ ಮೇಲೆ ನಿನ್ನೊಲವಿದ್ದರೆ
ಕಣ್ ಬಿಡುವುದು ಕವಿತೆ ಎದೆಯೊಳಗೆ
ಕನಸಿನ ಕುಲಾಯಿ ಹೊಲಿಸದೆ ಇದ್ದರೆ
ಕುಡಿಯೊಡೆಯುವುದೇ ಬಾಳು ಬೆಳ್ಳಂ ಬೆಳ್ಳಗೆ?
ಬೆಳೆಯಲು ನಾನು ಬೆಳೆಸಲು ನೀನೂ ಇದ್ದರೆ
ಕಾಣದ ಕೈಗಳ ಸಹವಾಸ ನಮಗೆ ಬೇಕೇ?
ಕರಿ ಬಿಳಿ ಮೋಡ ಕೂಡಾಡದೆ ಇದ್ದರೆ
ಭುವಿಗೆ ಸುರಿಯುವುದೇ ಮಳೆ?
ಸಖ್ಯದ ವ್ಯಾಖ್ಯಾನ ಉಕ್ಕಿಸದಿದ್ದರೆ
ಬಾಳ ನಾಲಿಗೆಗೆ ದಕ್ಕುವುದೇ ಸವಿ
Ella kavanagalu channagive….vandanegalu