ಸೂರ್ಯನಿಗೂ ಮನ್ಮಥನ ಧೂಳು

ಕಾವ್ಯ ಸಂಗಾತಿ

ಸೂರ್ಯನಿಗೂ ಮನ್ಮಥನ ಧೂಳು

ಬೆಂಶ್ರೀ ರವೀಂದ್ರ

ಕಡೆಗೂ ಅಂಟಿತು ಕವಿಗೆ ಸುನೀತಳ ಗೀಳು
ಕೋನಕೋನದಲವಳ ಸವಿಯುವ ಚಾಳು

ಪ್ರೇಮ ಕವನ ಬರೆದರೆ ವಿರಹದ ಕಾಟ
ಸೂರ್ಯಕವನವೆ ವಿರಹ ಮರೆವ ಮಾಟ

ದಿವಾರಾತ್ರಿಯಿವಳ ಬೇಗೆಗೆ ರವಿ ಬೆವರೆ
ಬೇಕಿವಳೆಂಬ ಬಯಕೆಬೇಟ ಆಗಿ ಉಸಿರೆ

ಋತುಮಾನ ಬದಲಾಗಿ ತಂಪಾಗುವನವ
ಹಿತವಾಗಿ ಬದಲಾಗಿ ಇವಳು ಕೆಂಪಾಗುವಳೆ

ತನ್ನಪಾಡಿಗೆ ತಾನಿರುವ ರವಿ ಕಾವ್ಯದ ವಸ್ತು
ಪ್ರೇಮಿಯ ಹಿಂದೋಡಿ ಕವಿಯು ಬೇಸ್ತು

ಬಾನಲಿದ್ದರೂ ಬರುವನವ ಮನೆಯೊಳಗೆ
ಬಗಲಿದ್ದರೂ ಬಿಡಳಿವಳು ಮನದ ಒಳಗೆ

ವಸಂತ ಮರಮರಳಿ ಮರೆಯದೆ ಬರುವಂತೆ
ಕವಿಪ್ರೇಮ ಫಲಿಸಲಿ ಹಾಲ್ಜೇನ ಸವಿಯಂತೆ


One thought on “ಸೂರ್ಯನಿಗೂ ಮನ್ಮಥನ ಧೂಳು

Leave a Reply

Back To Top