ಕಾವ್ಯಸಂಗಾತಿ
ಗಜಲ್
ಯ.ಮಾ.ಯಾಕೊಳ್ಳಿ
ಅರಿಯದೆ ನೋವು ನೀಡಿದ ಮನಸು ನನ್ಬ ಕ್ಷಮಿಸಲಿ
ನಿರೀಕ್ಷೆಗಳ ಹುಸಿಮಾಡಿದ್ದರೆ ಮರೆತು ನನ್ನ ಕ್ಷಮಿಸಲಿ
ಬದುಕು ನಾವು ಅಂದುಕೊಂಡಂತಲ್ಲ ಅದು ಚಲಿಸಿದಂತೆ
ಮನುಷ್ಯ ಅದರ ಕೈಗೊಂಬೆ ಎಂದರಿತು ನನ್ನ ಕ್ಷಮಿಸಲಿ
ಬೇಡಿದ ಎಲ್ಲ ಹೊತ್ತು ಸಮಯ ನೀಡಲು ಜಾಗವೆಲ್ಲಿದೆ
ದೊರೆತ ಕ್ಷಣಗಳ ಸವಿವ ಅನಿವಾರ್ಯತೆ ,ನನ್ನ ಕ್ಷಮಿಸಲಿ
.ಸಾಗರವೇ ನಮ್ಮದಾಗಬೇಕೆಂದಿದೆ ಕಿರು ಬೊಗಸೆ ನಮದು
ಇರುವಷ್ಟರಲೆ ಸಮಾಧಾನವಿದ್ದರಷ್ಟೇ ಶಾಂತಿ,,ನನ್ನ ಕ್ಷಮಿಸಲಿ
ಪರಿಮಿತಿಯೊಳಗೆ ಬದುಕುವ ಬಡವ ಬಹಳ ಆಸಿಸಬಾರದು
ಬಯಸುವದೇ ತಪ್ಪೆಂದೆಂದಾದರೆ ಮನ್ನಿಸಿ ನನ್ನ ಕ್ಷಮಿಸಲಿ