ಗಜಲ್

ಕಾವ್ಯಯಾನ

ಗಜಲ್

ರತ್ನರಾಯಮಲ್ಲ

ಮಧುಶಾಲೆಯತ್ತ ನಡೆಯುತಿರುವೆ ನೆಮ್ಮದಿಗಾಗಿ
ಮದಿರೆಯನ್ನು ಕುಡಿಯುತಿರುವೆ ನೆಮ್ಮದಿಗಾಗಿ

ಸಾಕಿ ಕೈಯಲ್ಲಿ ಮಧುಬಟ್ಟಲು ನೋಡೊದೆ ಚಂದ
ಷೇರ್-ಅಶಅರ್ ಬರೆಯುತಿರುವೆ ನೆಮ್ಮದಿಗಾಗಿ

ಮದಿರಾಲಯವು ತುಳುಕುತಿದೆ ಮಧುದಾಸರಿಂದ
ಗಾಲಿಬ್ ಅವರನ್ನು ಅರಿಯುತಿರುವೆ ನೆಮ್ಮದಿಗಾಗಿ

ನೋವಿಗೂ ನಗುತಿರಲು ಕಲಿಸುತಿದೆ ಮಧುಬನವು‌
ನನ್ನೊಳಗಿನ ನಾನನ್ನು ಹರಿಯುತಿರುವೆ ನೆಮ್ಮದಿಗಾಗಿ

ಮಧು ತುಂಬಿದ ಹೂಜಿಯೊಳಗೆ ಇರುವನು ‘ಮಲ್ಲಿ’
ನೆನ್ನೆಯ ದಿನಗಳನ್ನು ಮರೆಯುತಿರುವೆ ನೆಮ್ಮದಿಗಾಗಿ


Leave a Reply

Back To Top