ನಾ ಬಂಧಿಯಾದೆ

ಕಾವ್ಯ ಸಂಗಾತಿ

ನಾ ಬಂಧಿಯಾದೆ

ಒಲವು

ನಾ ದೂರ ದೂಡಿದಷ್ಟೂ
ನೀ ಅಪ್ಪಿಕೊಂಡೆ

ನಾ ಬಿಸಿಲಾದಷ್ಟೂ
ನೀ ನೆರಳಾದೆ

ನಾ ನೋವ ನೀಡಿದಷ್ಟೂ
ನೀ ನಗುವ ಹಂಚಿದೆ

ನಾ ಮನವ ಮುರಿದಷ್ಟೂ
ನೀ ಒಲವ ಕಟ್ಟಿದೆ

ನಾ ದ್ವೇಷಿಯಾದಷ್ಟೂ
ನೀ ಸ್ನೇಹಿಯಾದೆ

ನಾ ಮೌನಿಯಾದಷ್ಟೂ
ನೀ ತೆರೆದುಕೊಂಡೆ

ಒಟ್ಟಾರೆ ನಿನ್ನೊಲವ ಬಂಧಕೆ
ನಾ ಬಂಧಿಯಾದೆ.


Leave a Reply

Back To Top