ಗಜಲ್

ಗಜಲ್

ಅಶೋಕ ಬಾಬು ಟೇಕಲ್.

ಮನಗಳು ಮೌನವಾಗಿ ಕಲ್ಲು , ಕತ್ತಿಗಳೇ ಮಾತನಾಡುತ್ತಿವೆ ನೋಡಿಲ್ಲಿ
ಬಂಧಗಳ ಕಳಚಿಕೊಂಡು ಸಂಕೋಲೆಗಳೇ ಬೆಸೆದುಕೊಳ್ಳುತ್ತಿವೆ ನೋಡಿಲ್ಲಿ

ಆಡುವ ಮಾತುಗಳು, ನೋಡುವ ನೋಟದಲಿ ನಂಜು ಹಬೆಯಾಡುತ್ತಿದೆ
ಅಂಗಳದಲಿ ಬೆಳದ ಮಲ್ಲಿಗೆ ಮೊಗ್ಗುಗಳು ಮುಳ್ಳುಗಳಾಗುತ್ತಿವೆ ನೋಡಿಲ್ಲಿ

ಈದ್ ಇಸಾಯಿ ಸಂಕ್ರಮಣದ ಸಂಭ್ರಮ ನೇಣಿಗೇರಿ ನಿಟ್ಟುಸಿರು ಬಿಟ್ಟಿತೇ
ಪಾಪ ! ಬೀದಿ ಬೀದಿಗೂ ಕಿಚ್ಚು ಹಚ್ಚಿ ಬಣ್ಣಗಳ ಎರಚಲಾಗುತ್ತಿವೆ ನೋಡಿಲ್ಲಿ

ತನ್ನ ತಾ ಮಾರಿಕೊಂಡ ಪ್ರಭು ಶಿರ ಭಾಗಿ ಗುಲಾಮನಾಗಿ ಚಡಾವು ನೆಕ್ಕಿದ
ತುತ್ತಿನ ತತ್ವಾರದ ಮೇಳದಲಿ ತಲ್ವಾರುಗಳು ಕುಣಿಯುತ್ತಿವೆ ನೋಡಿಲ್ಲಿ

ಅಬಾಟೇ, ಒಮ್ಮೊಮ್ಮೆ ಕಂಬನಿಗಳು ನಗುತ್ತವೆ ಒಮ್ಮೊಮ್ಮೆ ಅಳುತ್ತವೆ ಏಕಿಲ್ಲಿ ?
ರುಜುವಾತಿಗೆ ರಾಮ ರಹೀಮರೇ ಕೊನೆಮೊದಲುಗಳಾಗಿ ಸಾಕ್ಷಿಗಳಾಗುತ್ತಿವೆ ನೋಡಿಲ್ಲಿ


5 thoughts on “ಗಜಲ್

Leave a Reply

Back To Top