ಪಯಣ

ಕಾವ್ಯ ಸಂಗಾತಿ

ಪಯಣ

ರೇಷ್ಮಾ ಕಂದಕೂರ

.

ಸಾಗುತಿದೆ ನಿರಂತರ
ಸಾವು ನೋವಿಗಿಲ್ಲದ ಅಂತರ
ಭಾವನಾ ಲೋಕದ ಅತಿರೇಕ
ನೆಲೆಕಾಣಲು ಹತೊರೆದು.

ಬತ್ತದ ಸೆಲೆ ಜೀವಂತ
ಸ್ಥಿತಿ ಲಯಕೂ ಆಯಾತ
ರೂಪಾದಿಗಳ ನೂಕಿ
ಸಮರೋಪಾದಿಯ ಜಾಡು ಹಿಡಿದು.

ಆರೋಪ ಪ್ರತ್ಯಾರೋಪದ ಕೇಕೆ
ಅರೋಹ ಅವರೋಹದಿ ನೆಪ
ಜಾರಿದರೂ ಮತ್ತೆ ಹರಾಜಿನಲಿ
ಗತ್ತಿನ ನಡಿಗೆಯಲಿ.

ಸುತ್ತ ಹಾಕಿದ ಪರಿಧಿ ದಾಟಿ
ಮುತ್ತಿ ತಿನ್ನುವ ಕೀಟಕೂ ರಹದಾರಿ
ಮುಕ್ತಿ ಕಾಣುವ ಧಾವಂತ
ಯುಕ್ತಿಯ ಸಶಕ್ತಿಯ ನಡಿಗೆಯಲಿ.

ಸಾಗುವ ತವಕ ಹೆಚ್ಚು
ಬಾಗಿ ಬೀಗಿ ತಗಾದೆಯಲಿ
ಜೀವನಾನುರಾಗಿಯಲಿ ತೇಲಿ
ಬವಬಂಧನದಿ ನೂಕುವ ಭರದಲಿ.

ಸರಹದ್ದು ಮೀರಿ
ತೆರೆದ ಹಂದರಕೂ ಹಿಂಜರಿಕೆ
ತರಾವರಿಯಲಿ ಜರಿದರೂ
ಮತ್ತೆ ಹೆಣಗಾಟ ಜೀವಂತ.


Leave a Reply

Back To Top