ಕಾವ್ಯ ಸಂಗಾತಿ
ಗಜಲ್
ವಾಣಿ ಭಂಡಾರಿ
ನಗು ನಗುತ್ತಲೇ ಎದೆಗಿರಿದು ರಕ್ತ ಬರಿಸಿ ಹೋದೆಯಲ್ಲ ನೀನು.
ನೋವು ಮರೆಯಲು ಕಹಿನೆನಪ ಮಂದಿರ ಕಟ್ಟಿರುವೆಯಲ್ಲ ನೀನು.
ಮರೆಯದ ನೆನಪುಗಳಿಗೆ ಮುಲಾಮು ಇರದೆ ತಡಕಾಡುತ್ತಿರುವೆ
ಕಟ್ಟಿದ ಕನಸುಗಳು ಛಿದ್ರಗೊಳಿಸಿ ಎದೆನೆಲಕ್ಕೆ ಬಡಿದೆಯಲ್ಲ ನೀನು.
ವಿರಹದ ನೆನಪುಗಳು ವಿಳಾಸ ಕೇಳಿ ಬಂದಿದ್ದವು ಆದರೆ ನೀನು ಬೆತ್ತಲಾಗಿದ್ದೆ
ಬದುಕಿನ ಪುಟದಲ್ಲಿ ಹರಿದ ಹಾಳೆಯಂತೆ ನಗ್ನ ಪಾಠ ಕಲಿಸಿದೆಯಲ್ಲ ನೀನು.
ನಿನ್ನ ನೆನಪೆ ಮಧುಬಟ್ಟಲಾಗಿ ನಿತ್ಯ ಸುಖ ನೀಡುತ್ತಿದೆ ಸಾಕು ನನಗೆ
ನಿಶೆ ತೋರಿ ಹಸಿ ಹಾದರಕ್ಕೆ ಜೊತೆಯಾಗಿ ಮನಕ್ಕೆ ಮಸಿ ಬಳಿದೆಯಲ್ಲ ನೀನು.
ವಾಣಿಹೃದಯದ ನೋವಿನ ಅರ್ತನಾದ ಅಮಲಿನ ಕಿವಿಗೆ ಕೇಳಲಿಲ್ಲ
ಹುಸಿ ನಾಟಕ ಬೀರಿ ಮನಸ್ಸಿಗೆ ಗೋರಿಕಟ್ಟಿ ತೊರೆದೆಯಲ್ಲ ನೀನು.
ಅರ್ಥಗರ್ಭಿತವಾದ ಗಝಲ್