ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಈರಪ್ಪ ಬಿಜಲಿ

ಕಂದನ ಹಸಿವ ನೀಗಲು ಹೆತ್ತಕರುಳು ಮರುಗುತಿದೆ ನೋಡು
ಚಂದನೆ ಮೊಗವು ಬಾಡಿದ್ದು ಕಂಡು ಕೊರಗುತಿದೆ ನೋಡು ||

ರೊಟ್ಟಿ ಬಡಿಯಲು ಪುಟ್ಟಿಯಲಿ ಹಿಟ್ಟು ಇಲ್ಲದಾಯಿತೇ
ರಟ್ಟೆಯ ಬಲಕೆ ದುಡಿಮೆಯ ಮಾಡಲು ಹುಡುಕುತಿದೆ ನೋಡು ||

ಕೈಯಲ್ಲಿ ಕಾಸಿಲ್ಲ ಕಾಯಕವ ಬೇಡಿ ಬೀದಿಯಲಿ ಅಲೆಯಿತಲ್ಲ
ಮೈಯಲ್ಲಿ ತ್ರಾಸಾಗಿ ಒಡಲಾಗ್ನಿ ಹೆಚ್ಚಾಗಿ ನಡುಗುತಿದೆ ನೋಡು ||

ಕೊನೆಗೆ ಮನೆಯ ಒಂದರಲ್ಲಿ ಕಸ ಮುಸುರಿ ಕೆಲಸ ಸಿಕ್ಕಿತಲ್ಲ
ಹೆಣ್ಣಿನ ಕಷ್ಟಕೆ ದೊರೆತ ದೈವಕೆ ಶಿರಬಾಗಿ ನೆನೆಯುತಿದೆ ನೋಡು||

ಪುಡಿಗಾಸು ಸೆರಗಲಿ ಹಿಡಿ ಅನ್ನ ಕರದಲಿ ತರಲು ಬಾಳಲಿ ಬಿಜಲಿ ಮೂಡಿತಲ್ಲ
ನಡೆನುಡಿಗೆ ಶರಣಾದ ಮಾತೆಯ ಮನವು ಕುಣಿಯುತಿದೆ ನೋಡು ||


About The Author

Leave a Reply

You cannot copy content of this page

Scroll to Top