ಕನಸುಗಳು

ಕಾವ್ಯಯಾನ

ಕನಸುಗಳು

ಪ್ರೊ ರಾಜನಂದಾ ಘಾರ್ಗಿ

ಸಾವಿರ ಕನಸುಗಳು ಮಡಿಲಲ್ಲಿ
ಜಾರಿದವು ಕೆಲವು ಎತ್ತುವ ಮುನ್ನ
ಒಡೆದು ಚೂರಾದವು ಕಣ್ಣಮುಂದೆ
ಉರುಳಿ ದೂರ ಸರಿದವು ಕೆಲವು
ಬೆಳೆಯುತ್ತ ಮುಟುರಿದವು ಅನೇಕ
ಕಸಿದು ಕೊಂಡರು ಕನಸುಗಳ
ಹರಿದು ಹಂಚಿದವರು ನಮ್ಮವರೆ
ಬೆಳೆಯುತ್ತಿದ್ದವು ಕನಸುಗಳು
ನನಸಾಗುವ ಕನಸುಗಳೊಂದಿಗೆ
ಶತಮಾನಗಳು ಹೇರಿದ ಮಿತಿಗಳು
ಕತ್ತು ಹಿಸುಕಿ ಉಸಿರುಗಟ್ಟಿಸಿದವು
ಮನದಾಳದಲ್ಲಿ ಹೂತು ಹಾಕಿದವು
ಹುಟ್ಟುತಿವೆ ಹೊಸ ಕನಸುಗಳು
ನವ ಭಾವಗಳ ಹೆಣೆಯುತಿವೆ
ಬೇರುಗಳು ಇಳಿಯುತಿವೆ ಆಳವಾಗಿ
ಮನಸನು ಆವರಿಸುತಿವೆ ಮಿತಿ ಮೀರಿ
ಚಾಚುತಿವೆ ಕೊಂಬೆಗಳು ದಶ ದಿಕ್ಕಲ್ಲಿ
ಬೆಳೆಯುತ ದಿಗಂತದಲ್ಲಿ ಹರಡುತ.


One thought on “ಕನಸುಗಳು

  1. Super mam I Knew u as technology lectuere but u proved to be rare combination of science and kannada literature I am very happy to see u as literature icon

Leave a Reply

Back To Top