ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಲ್ಲಿಗೆಯಾದಳು ವಸುಮತಿ

ವತ್ಸಲಾ ಶ್ರೀಶ ಕೊಡಗು

ಮರೆಯದೆ ಪತ್ರವ
ಧರಣಿಗೆ ಬರೆದನು
ದೂರದಿ ಮೇಘಗಳಾ ದೊರೆಯು|
ಸೆರಗನು ನಿಮಿಷದಿ
ಸರಸದಿ ಚುಂಬಿಸಿ
ಸುರಿಸಿದ ಮುತ್ತಿನ ರಾಶಿಯನು||

ಅಂದದ ಗೆಳತಿಯ
ಚಂದದ ತನುವನು
ಬಂಧಿಸಿ ನೀರಿನ ತೋಳಿನಲಿ|
ಬಿಂದಿಯನಿರಿಸಿರೆ
ಸುಂದರಿ ಹಣೆಗಾ
ನಂದದಿ ನಲಿದಳು ಭೂರಮೆಯು||

ಇಳೆಯನು ರಮಿಸುತ
ಕಳೆದನು ತಾಪವ
ಬಳಿ ಸಾರಿದನವ ಪ್ರೇಮದಲಿ|
ಮಳೆಯಾಗುತ ತಾ
ಹೊಳೆಯಾಗು ತಾ
ಚೆಲು ಧರಣಿಯನಾವರಿಸಿದನು||

ಘಲ್ಲೆನ್ನಲು ನಭ
ಮೆಲ್ಲನೆ ದೂರದಿ
ಬಿಲ್ಲಿಗೆ ರಂಗಿನ ಲೇಪನವು|
ನಿಲ್ಲದ ಮಳೆಯಲಿ
ಚೆಲ್ಲಿದ ಬಿಸಿಲಿಗೆ
ಮಲ್ಲಿಗೆಯಾದಳು ವಸುಮತಿಯು||


About The Author

3 thoughts on “ಮಲ್ಲಿಗೆಯಾದಳು ವಸುಮತಿ”

Leave a Reply

You cannot copy content of this page

Scroll to Top