ಸುತ್ತಿಟ್ಟ ದಾರ

ಕಾವ್ಯ ಸಂಗಾತಿ

ಸುತ್ತಿಟ್ಟ ದಾರ

ಸ್ಮಿತಾ ಭಟ್

1K+ Love Art Pictures | Download Free Images on Unsplash

ಎಷ್ಟೇ ಸುತ್ತಿಟ್ಟರೂ
ಮತ್ತೆ ಮತ್ತೆ ಬಿಚ್ಚಿಕೊಳ್ಳುವ
ದಾರದ ಉಂಡೆಯ
ಬಿಗಿಯಾಗಿ ಕಟ್ಟಿ
ಉಸಿರುಗಟ್ಟುವಂತೆ ತುಂಬಿ
ಬಾಯಿಗೆ ಪಟ್ಟಿ

ಬಿಡಿಸಿಕೊಂಡರೆ ಏನೆಲ್ಲಾ ಆಗುತ್ತಿದ್ದೆ
ಚಂದದ ಕಸೂತಿ, ಅರಳಿದ ಹೂವು
ಮೋಹಕ ಹಾರ.
ಹರಿದದ್ದೆಲ್ಲ ಜೋಡಿಸಿ
ಉಳಿಸುತ್ತಿದ್ದೆ ಭಾವಗಳನ್ನ
ಹಳಹಳಿಕೆ ತಪ್ಪುವುದಿಲ್ಲ.

ಪಟ್ಟಿ ಬಿಡಿಸುವ ಕೈಗಳು
ಅಗಸ ತೋರುವ ರೆಕ್ಕೆಗಳು
ಬಣ್ಣ ತುಂಬುವ ಕುಂಚ
ಎಲ್ಲವೂ ಪ್ರೇಮಮಯ
ಆಗೀಗ ಚೆಲ್ಲಾಪಿಲ್ಲಿಯಾಗುವ
ಸುಖ ಸೇಡಿನದ್ದಲ್ಲ.

ಸರಕ್ಕನೆ ದೂಡಿ ಮುಚ್ಚಿದ ಬಾಗಿಲು
ಅಲ್ಲಲ್ಲೇ ಹರಿವಿಕೊಂಡ ಭಾವ
ಸಂತೈಸಿಕೊಳ್ಳುವ ಸಮಾನರು
ಆಗೀಗ ಇಣುಕಿ ಇಳಿಬಿಟ್ಟ
ದಾರದಿಂದಲೇ
ಜೀಕುವ ಜೀವ
ಬಿಡಿಸಿ ಕೊಳ್ಳುವುದೋ
ಸುತ್ತಿಕೊಳ್ಳುವುದೋ
ಅರ್ಥವಾಗುತ್ತಿಲ್ಲ.


One thought on “ಸುತ್ತಿಟ್ಟ ದಾರ

Leave a Reply

Back To Top