ಗಜಲ್

ಗಜಲ್

ಗಜಲ್

ವೈ.ಎಂ.ಯಾಕೊಳ್ಳಿ

ನಮ್ಮೆದೆಯ ನೋವುಗಳ ನಾವು ನುಂಗಬೇಕು‌ ಇಲ್ಲಿ
ಎದೆಯ ಕಷ್ಟಗಳನಾರಿಗೂ ಹಂಚದಿರಬೇಕು ಇಲ್ಲಿ

ಅವರದೆ ಚಿಂತೆ ಅವರಿಗೆ ಹೆಚ್ಚಾಗಿರಲು ಲೋಕದಲಿ
ನಿನ್ನ ಬವಣೆಗೆಲ್ಲಿ ಆಸ್ಪದ? ನುಂಗಿ ತೆಪ್ಪಗಿರಬೇಕು ಇಲ್ಲಿ

ಕೊರಳ ಗರಳವನೆ ಬಚ್ಚಿಟ್ಟ ಆ ನೀಲಕಂಠನೆ ಮಾದರಿ
ಒಳಗೂ ಕಳಿಸದೇ ಹೊರಗೂ ಬಿಡದೆ ಬಚ್ಚಿಡಬೇಕು ಇಲ್ಲಿ

ನಲಿವೋ ನೋವೋ ಎಲ್ಲ ಹೊರಟು ಹೋಗುವದು ಒಂದಿನ
ಒಂಟಿ ನೀನು ಈ ಬದುಕ ದಾರಿಯಲಿ, ಅರಿತಿರಬೇಕು ಇಲ್ಲಿ

ಬಂದ ಯುಗಾದಿ ಹಳತಾಗುವದು ಮಾತಿನಲಷ್ಟೇ ಹೊಸತು
“ಯಯಾ”ನಿನ್ನೆ ಅರಳಿದ‌ ಪುಷ್ಪ ಇಂದು ಬಾಡಲೇಬೇಕು ಇಲ್ಲಿ


Leave a Reply

Back To Top